ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೋಮೇಶ್ವರ ದೇವಸ್ಥಾನದ ಮುಂದೆ ಅಝಾನ್ - ವೈರಲ್ ಆಯ್ತು ಟ್ವೀಟ್

ಬೆಂಗಳೂರಿನ ಹಲಸೂರಿನಲ್ಲಿರುವ 1500 ವರ್ಷದ ಐತಿಹಾಸಿಕ ದೇವಾಲಯದ ಎದುರು ಮಸೀದಿ ನಿರ್ಮಿಸಲಾಗಿದೆ. ದೇವಸ್ಥಾನದಲ್ಲಿ ಸರಿಯಾಗಿ ಮಂಗಳಾರತಿ ಮಾಡುವ ವೇಳೆ ಸ್ಪೀಕರ್‌ಗಳಲ್ಲಿ ಅಝಾನ್ ಕೇಳಿಬರುವ ವಿಡಿಯೋ ಸಾಮಾಜಿಕ ಜಾಲತಾಣ xನಲ್ಲಿ ವೈರಲ್ ಆಗುತ್ತಿದೆ.

ದೇವಾಲಯದ ಎದುರಿಗೆ ಇರುವ ಮಸೀದಿಯಲ್ಲಿ ದಿನಕ್ಕೆ 5 ಬಾರಿ ಇದೇ ರೀತಿ ಅಝಾನ್ ಕೇಳಿಬರುತ್ತೆ. ನಾವು ದೇವಸ್ಥಾನದಲ್ಲಿ ಇದೀವಿ ಅಂತ ಅನಿಸೋದಿಲ್ಲ. ಮಂಗಳಾರತಿ ಮಾಡುವ ವೇಳೆಯೇ ಅಝಾನ್ ಕೂಗುತ್ತಾರೆ.

1,500 ವರ್ಷದ ಇತಿಹಾಸ ಹೊಂದಿರುವ ದೇವಾಲಯದ ಎದುರು ಮಸೀದಿ ಕಟ್ಟಲು ಅನುಮತಿ ನೀಡಿದವರು ಯಾರು? ಅವರಿಗೆ ಮಸೀದಿ ನಿರ್ಮಿಸಲು ಇಷ್ಟವಾದ ಸ್ಥಳ ಹೇಗೆ ಸಿಗುತ್ತಿದೆ? ಕೇವಲ ಹಿಂದೂಗಳು ಮಾತ್ರ ಸೆಕ್ಯುಲರ್ ಆಗಿರಬೇಕಾ? ಶಿವನ ದೇವಸ್ಥಾನಕ್ಕೆ ಶಿವನನ್ನು ನೋಡಲು ಬಂದ್ರೆ ಸಿಗೋದು ಏನು? ಅಝಾನ್ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿ ವಿಡಿಯೋ ಮಾಡಲಾಗಿದೆ. ಸದ್ಯ ಸಾಮಾಜಿಕ ಜಾಲತಾಣ x ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

Edited By : Nagesh Gaonkar
PublicNext

PublicNext

29/11/2024 05:40 pm

Cinque Terre

26.56 K

Cinque Terre

21