ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ಮನೆಯಿಂದ ಹೊರಹೋದ ಗೃಹಿಣಿ ನಾಪತ್ತೆ- ದೂರು ದಾಖಲು

ಪಡುಬಿದ್ರಿ: ಪೂನಾ ಮೂಲದ, ಉಚ್ಚಿಲ ಬಡಾ ಗ್ರಾಮದ ಅಬ್ದುಲ್‌ ಅಜೀಜ್‌ ಅವರನ್ನು ವಿವಾಹವಾಗಿದ್ದ ಅಯಿಷಾ (33) ಅವರು ಮನೆ ಬಿಟ್ಟು ಹೋದವರು ಮರಳಿ ಮನಗೆ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮಗ ಹಾಗೂ ಗಂಡನೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದು, ಕಳೆದ 6 ತಿಂಗಳಿನಿಂದ ಅವರು ಬಡಾ ಗ್ರಾಮದಲ್ಲಿದ್ದರು. ತಾಯಿಯನ್ನು ಕರೆದುಕೊಂಡು ಅಬ್ದುಲ್‌ ಅಜೀಜ್‌ ಅವರು ಮಣಿಪಾಲದ ಆಸ್ಪತ್ರೆಗೆ ಹೋಗಿ ಮರಳಿ ಬರುವ ವೇಳೆ ಅಯಿಷಾ ಮನೆಯಲ್ಲಿ ಇರಲಿಲ್ಲ.ಆಯಿಷಾ ಅವರ ಬಗ್ಗೆ ಯಾರಿಗಾದರೂ ಸುಳಿವು ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ(0820 2555452)ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

29/11/2024 12:57 pm

Cinque Terre

1.52 K

Cinque Terre

1

ಸಂಬಂಧಿತ ಸುದ್ದಿ