ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ರಸ್ತೆ ಬಂದ್ ಮಾಡಿ ಅಲ್ಲಿಯೇ ಉಪಹಾರ ಸೇವಿಸಿದ ನೇಕಾರರು!

ರಬಕವಿ-ಬನಹಟ್ಟಿ: ಬನಹಟ್ಟಿಯಲ್ಲಿ ಕೆಎಚ್‍ಡಿಎಸಿ ನೇಕಾರರು ಕೈಗೊಂಡ ಅನಿರ್ದಿಷ್ಟಾವಧಿ ಮುಷ್ಕರವು ಬುಧವಾರ ಎಂಟನೇ ದಿನ ಪೂರೈಸಿದೆ.. ಪ್ರತಿಭಟನಾನಿರತ ನೇಕಾರರು ಭಾಂಗಿ ವೃತ್ತದ ಮುಖ್ಯರಸ್ತೆಯನ್ನು ಬಂದ್ ಮಾಡಿ, ರಸ್ತೆಯಲ್ಲಿಯೇ ಜಂತರದ ಮೂಲಕ ನೂಲು ಸುತ್ತಿ, ಅಲ್ಲಿಯೇ ಉಪಹಾರ ಸೇವಿಸಿ, ಆಕ್ರೋಶ ಹೊರಹಾಕಿದರು.

ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಒತ್ತಾಯಿಸಿ, ದೇಶದ ಮಾನಮುಚ್ಚುವ ನೇಕಾರರು ಇಂದು ಬೀದಿಗೆ ಬಿದ್ದು, ರಸ್ತೆಯಲ್ಲಿಯೇ ಉಪಹಾರ ಮಾಡುವಂತಾಗಿದ್ದು, ಶೋಚನೀಯ ಸ್ಥಿತಿಯಾಗಿದೆ. ಎಂಟು ದಿನ ಕಳೆದರೂ ಯಾವೊಬ್ಬ ಜನಪ್ರತಿನಿಧಿ ಬಾರದೇ ನಿರ್ಲಕ್ಷ್ಯ ತೋರಿಸುತ್ತಿರುವುದು ನೇಕಾರರ ಮೇಲೆ ಆಗುತ್ತಿರುವ ಅನ್ಯಾಯವಾಗಿದೆ.

ಮುಂದಿನ ದಿನಗಳಲ್ಲಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ರಸ್ತೆ ಬಂದ್ ಆಗಿದ್ದರಿಂದ ಬೈಕ್ ಸವಾರರು ಸೇರಿದಂತೆ ವಾಹನ ಸವಾರರು ಬೇರೆ ದಾರಿಗಳತ್ತ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ನೇಕಾರರು ಘೋಷಣೆಗಳನ್ನು ಕೂಗಿ ಸರ್ಕಾರ ಮತ್ತು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.

Edited By : Vinayak Patil
PublicNext

PublicNext

27/11/2024 05:38 pm

Cinque Terre

17.79 K

Cinque Terre

0