ಕೊಡಗು: ಕೊಡವ ಮಕ್ಕಡ ಕೂಟದ ವತಿಯಿಂದ 100ನೇ ಕೊಡವ ಪುಸ್ತಕ ಬಿಡುಗಡೆ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ 100ನೇ ಕೊಡವ ಪುಸ್ತಕ 100ನೇ ಮೊಟ್ಟು ಕೃತಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದ್ರು.
ಈ ಸಂದರ್ಭ ಮಾತನಾಡಿದ ಹಿರಿಯ ಸಾಹಿತಿ ಅಪ್ಪಣ್ಣ, ಜ್ಞಾನ ಭಂಡಾರದಿಂದ ಕೂಡಿರುವ ಕೊಡವ ಸಾಹಿತ್ಯ ಕ್ಷೇತ್ರ ಭಾಷೆ ಮತ್ತು ಜಾತಿಯನ್ನು ಮೀರಿ ಬೆಳೆದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಬರಹಗಾರರಿಗೆ ಪ್ರೋತ್ಸಾಹದ ಕೊರತೆ ಎದುರಾಗಿದೆ.
ದಿಗ್ಗಜ ಸಾಹಿತಿಗಳ ನಡುವೆ ನಾವು ಬೆಳೆಯುವುದು ಕಷ್ಟ ಎನ್ನುವ ಆತಂಕ ಹೊಸ ಬರಹಗಾರರಿಂದ ದೂರವಾಗಬೇಕು. ಉತ್ತಮ ಸಾಹಿತ್ಯ ರಚನೆಯ ಮೂಲಕ ಮುಂದೆ ಬರಬೇಕು ಎಂದು ಬಾಚರಣಿಯಂಡ ಅಪ್ಪಣ್ಣ ಕಿವಿಮಾತು ಹೇಳಿದರು.
PublicNext
24/11/2024 07:17 pm