ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಪೌರಕಾರ್ಮಿಕರ ದಿನಾಚರಣೆ ಅವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ - ಡಾ.ಮಂತರ್ ಗೌಡ

ಕೊಡಗು: ರಾಷ್ಟ್ರದಲ್ಲಿ ಶುದ್ಧ ಗಾಳಿ ಮತ್ತು ಪರಿಸರ ಹೊಂದಿರುವ ಪ್ರಮುಖ ನಗರ/ ಪಟ್ಟಣಗಳಲ್ಲಿ ಒಂದಾದ ಮಡಿಕೇರಿಯ ಶುಚಿತ್ವಕ್ಕೆ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಶ್ಲಾಘಿಸಿದ್ದಾರೆ.

ನಗರಸಭೆ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾರ್ವಜನಿಕ ಜೀವನದಲ್ಲಿ ಪೌರಕಾರ್ಮಿಕರನ್ನು ಗೌರವಿಸಬೇಕು. ಪೌರಕಾರ್ಮಿಕರು ಇತರರಂತೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಡಾ.ಮಂತರ್ ಗೌಡ ತಿಳಿಸಿದರು.

ಪೌರಕಾರ್ಮಿಕರು ಪಟ್ಟಣ, ನಗರ, ಮಹಾನಗರ ಪಾಲಿಕೆಗಳ ಬೆನ್ನುಲುಬು ಎಂದರೆ ತಪ್ಪಾಗಲಾರದು. ರಜೆ ಅವಧಿಯಲ್ಲಿ ರಜೆ ಪಡೆಯದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ನಗರ, ಪಟ್ಟಣ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಡಾ ಮಂತರ್ ಗೌಡ ನುಡಿದರು.

ಪೌರಕಾರ್ಮಿಕರು ವೃತ್ತಿಯ ಜೊತೆಗೆ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕರು ಸಲಹೆ ಮಾಡಿದರು.

Edited By : Vijay Kumar
Kshetra Samachara

Kshetra Samachara

22/11/2024 10:07 pm

Cinque Terre

160

Cinque Terre

0

ಸಂಬಂಧಿತ ಸುದ್ದಿ