ಕೊಡಗು: 1965ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ವೀರಮರಣವನ್ನಪ್ಪಿದ ನಾಯಕ್ ಕೂಕಂಡ ಎನ್ . ಪೊನ್ನಪ್ಪನವರ ನೆನಪಿಗಾಗಿ ಪೊನ್ನಂಪೇಟೆಯ ಜೋಡು ಬೀಟಿ- ಕುಂದ ಸಂಪರ್ಕ ರಸ್ತೆಗೆ ದಿವಂಗತ ಕೂಕಂಡ. ಎನ್.ಪೊನ್ನಪ್ಪ ರಸ್ತೆ ಎಂದು ನಾಮಕರಣ ಮಾಡಿದ್ದು ರಸ್ತೆಯನ್ನ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕೊಟ್ಟ್ ಕತ್ತಿರ ಸೋಮಣ್ಣ ಉದ್ಘಾಟಿಸಿದರು.
ಬಳಿಕ ಕೊಟ್ಟ್ ಕತ್ತಿರ ಸೋಮಣ್ಣ ಮಾತನಾಡಿ ಅದೆಷ್ಟೋ ವೀರಯೋಧರು ದೇಶಕ್ಕಾಗಿ ಸೇವೆ ಸಲ್ಲಿಸಿದರೂ ಎಲ್ಲೆಡೆ ವೀರಯೋಧನಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕೆಂದರು. ಕೂಕಂಡ ಪೊನ್ನಪ್ಪನವರು ಯುದ್ಧದಲ್ಲಿ ಶತ್ರುಪಡೆಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ್ದು ಅವರ ಸೇವೆ ಸೇನೆಗೆ ಅಪಾರವೆಂದು ಗುಣಗಾನ ಮಾಡಿದ್ರು.
PublicNext
18/11/2024 10:53 pm