ಕೊಡಗು: ಕರ್ನಾಟಕ ರಾಜ್ಯ ಸುನ್ನಿ ಸ್ಪೂಡೆಂಟ್ಸ್ ಫೆಡರೇಷನ್ (SSF) ಇದರ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮ ನವೆಂಬರ್ 16 ಹಾಗೂ 17 ಎರಡು ದಿನ ಕೊಡಗು ಜಿಲ್ಲೆಯ ಕೊಂಡಂಗೇರಿಯಲ್ಲಿ ನಡೆಯಲಿದೆ.
ವಿದ್ಯಾರ್ಥಿ ಪ್ರತಿಭೆಗಳಲ್ಲಿ ಅಡಗಿರುವ ಸುಕ್ತ ಪ್ರತಿಭೆಯನ್ನು ಹೊರತಂದು ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ಎಸ್‌ಎಸ್‌ಎಫ್ ಪ್ರತಿ ವರ್ಷವೂ ದೇಶದಾದ್ಯಂತ ಸಾಹಿತ್ಯೋತ್ಸವ ನಡೆಸಿಕೊಂಡು ಬರುತ್ತಿದೆ. ಯೂನಿಟ್, ಸೆಕ್ಟರ್ ಡಿವಿಷನ್ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಪ್ರತಿಭೆಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ನೂರಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳು ಹತ್ತು ವೇದಿಕೆಗಳಲ್ಲಿ ನಡೆಯಲಿದ್ದು ಐವತ್ತು ತೀರ್ಪುಗಾರರು ಸ್ಪರ್ಧೆಯ ತೀರ್ಪು ನಿರ್ಮಿಸಲಿದ್ದಾರೆ. ರಾಜ್ಯದ 25 ಜಿಲ್ಲೆಗಳ ಒಂದು ಸಾವಿರದಷ್ಟು ಪ್ರತಿಭೆಗಳು ಭಾಗವಹಿಸಲಿದ್ದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ನವೆಂಬರ್ 29,30ರಂದು ಗೋವಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಎಂದು ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ತಿಳಿಸಿದ್ರು.
Kshetra Samachara
15/11/2024 05:55 pm