ಮೊಳಕಾಲ್ಮುರು: ಗೃಹಣಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪಟ್ಟಣದ ಕೋನಸಾಗರ ರಸ್ತೆಯಲ್ಲಿ ವಾಸವಾಗಿದ್ದ ಟಿ.ಪುಷ್ಪಳನ್ನ, ರಾಮದಾಸ್ ಎಂಬಾತ 2009ರಲ್ಲಿ ಮದುವೆಯಾಗಿದ್ದ. ಇವರಿಗೆ ಎರಡು ಗಂಡು ಒಂದು ಹೆಣ್ಣು ಮಕ್ಕಳಿದ್ದಾರೆ. ರಾಮದಾಸ್‌ಗೆ ಯಾವಾಗ ಅನುಮಾನವೆಂಬ ಭೂತ ಹುಟ್ಟಿತೋ ಅಂದಿನಿದಲೇ ಸಂಸಾರದಲ್ಲಿ ಬಿರುಕು ಉಂಟಾಗಿದೆ.
ಮದುವೆಯಾದಗಿನಿಂದಲೂ ಪದೇಪದೇ ಹೆಂಡತಿಯ ಮೇಲೆ ಅನುಮಾನ ಪಡುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದ, ಕಳೆದ ಏಳು ವರ್ಷಗಳಿಂದ ತವರು ಮನೆಗೆ ಕಳುಹಿಸದೇ ಪ್ರತಿನಿತ್ಯ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಮೃತ ಪುಷ್ಪಳನ್ನು ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ಪ್ರಕರಣ ದಾಖಲಿಸಿದ್ದಾರೆ. ಪುಷ್ಪಳ ಕುತ್ತಿಗೆಯ ಸುತ್ತ ಒತ್ತಿದ ಗುರುತು ಕಂಡುಬಂದಿದ್ದು, ಗಂಡನೇ ಕೊಲೆ ಮಾಡಿರುವ ಶಂಕೆ ಇದೆ. ಆದ್ದರಿಂದ ಇದನ್ನು ತನಿಖೆ ಮಾಡಿ ನಮಗೆ ನ್ಯಾಯ ಒದಗಿಸಬೇಕು ಮೃತ ಪುಷ್ಪಾಳ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
PublicNext
22/11/2024 08:56 pm