ಬೆಳಗಾವಿ: ವಕ್ಫ್ ಬೋರ್ಡ್ ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿಯಲ್ಲಿಯೂ ಬೃಹತ್ ಪ್ರತಿಭಟನೆ ನಡೆಸಿದೆ.
ಬೆಳಗಾವಿ ನಗರದ ಸರ್ದಾರ್ ಮೈದಾನದಿಂದ ಡಿಸಿ ಕಚೇರಿವರೆಗೆ ಡೊಳ್ಳು ಕುಣಿತ ವಿವಿಧ ಕಲಾ ತಂಡಗಳ ನೇತೃತ್ವದಲ್ಲಿ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಚೆನ್ನಮ್ಮ ವೃತ್ತದ ಮೂಲಕ ಡಿಸಿ ಕಚೇರಿಗೆ ತೆರಳಿ, ಡಿಸಿ ಕಚೇರಿ ಮುಂಭಾಗದಲ್ಲಿ ಟೆಂಟ್ ಹಾಕಿ ಇಡೀ ದಿನ ಧರಣಿ ನಡೆಸಲಿದೆ.
ನಮ್ಮ ಭೂಮಿ, ನಮ್ಮ ಹಕ್ಕು ಬಿತ್ತಿ ಪತ್ರಗಳ ಪ್ರದರ್ಶನ ಮಾಡಿರುವ ಪ್ರತಿಭಟನಾಕಾರರು, ಲ್ಯಾಂಡ್ ಜೀಹಾದ್, ಅನ್ನದಾತರ ಭೂಮಿ ಕಬಳಿಸುತ್ತಿರುವ ಜಮೀರ್ ಅಹ್ಮದ್‌ಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 'ಸತ್ತಪ್ಪೋ ಸತ್ತೋ ಜಮೀರ್ ಸತ್ತೋ', 'ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ', 'ರೈತರ ಜಮೀನು ಕಬಲಿಸುತ್ತಿರುವ ಸಿದ್ದರಾಮಯ್ಯ, ಲಫಂಗ್ ಜಮೀರ್‌ಗೆ ಧಿಕ್ಕಾರ', 'ನಮ್ಮ ಭೂಮಿ ನಮ್ಮ ಹಕ್ಕು', 'ವಕ್ಫ್ ಹಠಾವೋ ದೇಶ ಬಚಾವೋ', 'ಜಂಪಿಂಗ್ ಜಪಂಗ್, ಜಮೀರ್ ಲಫಂಗ್' ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಮಹಾಂತೇಶ ದೊಡ್ಡಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
PublicNext
22/11/2024 07:17 pm