ಬೆಂಗಳೂರು: ಸಮಸ್ಯೆಗಳ ಆಗರವಾಗಿರುವ ವಿಶ್ವ ವಿದ್ಯಾಲಯ ಅದು. ಮಹಿಳೆಯರದ್ದೇ ವಿವಿ ಆದರೂ ಸ್ವಚ್ಛತೆ ಮರೀಚಿಕೆ. ವಾಶ್ ರೂಮ್ ನಿಂದ ಹಿಡಿದು ಕ್ಲಾಸ್ ರೂಮ್ ವರೆಗೂ ಅಸಹ್ಯ ಅನ್ನೋಷ್ಟರ ಮಟ್ಟಿಗೆ ಅಧ್ವಾನ ಆಗಿರುವ ವಿವಿಗೆ ಮಹಿಳಾ ಆಯೋಗ ಕ್ಲಾಸ್ ತೆಗೆದು ಕೊಂಡಿದೆ.
ಇಲ್ಲಿರುವ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಗೆ ಆಗಲೀ ಅಥವಾ ಪ್ರಭಾರ ವಿಸಿಗಾಗಲಿ ಪೋಷ್ ಕಮಿಟಿ ಎಂದರೇನು? ICC ಅರ್ಥ ಏನು? ಗೊತ್ತಿಲ್ಲ! ಟೋಟಲಿ ವಿವಿಯನ್ನು ಪರಿಶೀಲನೆ ಮಾಡಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ, ವಿಸಿ ಹಾಗೂ ರಿಜಿಸ್ಟ್ರಾರ್ ಗೆ ಕ್ಲಾಸ್ ತೆಗೆದುಕೊಂಡರು.
ಕಲ್ಲಿನ ಮೇಲೆ ಬೋರ್ಡ್ ಬೆಂಚ್ ಇಟ್ಟು ವಿದ್ಯಾರ್ಥಿನಿಯರು ಪಾಠ ಕೇಳುವ ದುಸ್ಥಿತಿ. ಕುಡಿಯುವ ನೀರಿನ ಘಟಕ ಇಲ್ಲ, ಶೌಚಾಲಯ ಅವ್ಯವಸ್ಥೆಗೆ ಹೆಣ್ಣುಮಕ್ಕಳು ಪಿರಿಯೆಡ್ಸ್ ಆದ್ರೆ 5 ದಿನ ರಜೆ ಹಾಕ್ತಾರೆ. ಲ್ಯಾಬ್ ಸರಿ ಇಲ್ಲ, ಬೇಸಿನ್ ನಲ್ಲಿ ಅದೆಷ್ಟು ತಿಂಗಳ ನೀರು ಸ್ಟೋರ್ ಆಗಿದಿಯೋ? ಕಸದ ರಾಶಿ! ಹಾಸ್ಟೆಲ್ ಊಟದ ಸಮಸ್ಯೆ ಒಂದಾ ಎರಡಾ? ಹೀಗೆ ಮಹಾರಾಣಿ ವಿವಿಯಲ್ಲಿ ನೂರಾರು ಸಮಸ್ಯೆಗಳು ಪರಿಹಾರ ಕಂಡು ಕೊಳ್ಳದೇ ಹಾಗೆ ಬಿದ್ದಿವೆ.
ವಿದ್ಯಾರ್ಥಿನಿಯರ ಜೊತೆ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ ಸಂವಾದ ನಡೆಸಿದ್ದು, ಸಾಲು ಸಾಲು ಸಮಸ್ಯೆ ಕೇಳಿ ಸುಸ್ತಾದರು. ಮುಖ್ಯಮಂತ್ರಿಗಳ ಕುಂದುಕೊರತೆ ವಿಭಾಗಕ್ಕೆ ಕರೆ ಮಾಡಿ ಸಿಎಂ OSD ಗೆ ಕ್ರಮಕ್ಕೆ ಆಗ್ರಹಿಸಿದ್ರು. ಸಿಎಂ ವಿಶೇಷ ಕರ್ತವ್ಯ ಅಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರ ಪರಿಹಾರ ಒದಗಿಸುವ ಭರವಸೆ ಕೊಟ್ಟರು.
PublicNext
21/11/2024 08:37 pm