ಬೆಂಗಳೂರು: ಶಿಕ್ಷಣ ಸಚಿವರಿಗೆ ಕನ್ನಡ ಬರೋದಿಲ್ಲ ಎಂದು ವಿದ್ಯಾರ್ಥಿಯೋರ್ವ ವೀಡಿಯೊ ಕಾನ್ಫರೆನ್ಸ್ ನಲ್ಲಿ ಹೇಳಿದ್ದಕ್ಕೆ ಸಿಡಿಮಿಡಿಗೊಂಡು ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದ್ದ ಸಚಿವ ಮಧು ಬಂಗಾರಪ್ಪ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ವಿದ್ಯಾರ್ಥಿಯು ಸಚಿವರಿಗೆ ಕನ್ನಡ ಬರೋದಿಲ್ಲ ಎಂದಾಗ ಒಬ್ಬ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ, ಸಚಿವನಾಗಿ ಮಧು ಬಂಗಾರಪ್ಪ ಸಮಾಧಾನದಿಂದಲೇ ಉತ್ತರಿಸಬೇಕಿತ್ತು. ಬದಲಾಗಿ ಬಡಪಾಯಿ ವಿದ್ಯಾರ್ಥಿ ಮೇಲೆ ದೌರ್ಜನ್ಯದ ಮಾತಾಡಿದ್ದಾರೆ!
ಇದೊಂದು ತುಘಲಕ್ ದರ್ಬಾರೇ ಆಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಪ್ರತಿಪಕ್ಷವಿದೆ. ಇಲ್ಲಿ ಜನಾದೇಶವೇ ಸುಪ್ರೀಂ. ಏನು ವಿದ್ಯಾರ್ಥಿಗಳಿಗೆ ಧಮ್ಕಿ ಹಾಕ್ತೀರಾ? ಹುಷಾರ್, ಮಧು ಬಂಗಾರಪ್ಪನವರೇ. ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೆಕಾಯಿ ತಿಂತಿರ್ತೀವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
PublicNext
21/11/2024 07:51 pm