ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಬಡವರ ಬಿಪಿಎಲ್ ಕಾರ್ಡುಗಳು ಮಾತ್ರ ರದ್ದಾಗಿವೆ - ಮಾಜಿ ಸಚಿವ ಜೀವರಾಜ್

ಚಿಕ್ಕಮಗಳೂರು : ಬಿಪಿಎಲ್ ಕಾರ್ಡುಗಳ ರದ್ದು ವಿಚಾರ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಮಾತನಾಡಿರುವ ಮಾಜಿ ಸಚಿವ ಜೀವರಾಜ್ ಬಡವರ ಕಾರ್ಡುಗಳನ್ನು ಮಾತ್ರ ತೆಗೆದಿದ್ದಾರೆ ಇನೋವಾ ಕಾರಲ್ಲಿ ಓಡಾಡುವವವರು ಕಾರ್ಡುಗಳು ಹಾಗೆ ಇವೆ. ಬಡವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದನ್ನು ನಿಲ್ಲಿಸಿ ಅವರ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಆಡಳಿತ ಪಕ್ಷಕ್ಕೆ ಕಿವಿ ಹಿಂಡಿದ್ದಾರೆ.

ನಾನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವನಾಗಿದ್ದಾಗ ಪಡಿತರ ದುರ್ಬಳಕೆಯಾಗದಂತೆ ವಿಶೇಷ ಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೆ ಅದರಲ್ಲಿ ಅಧಿಕೃತ ಕುಟುಂಬದ ಸದಸ್ಯ ಹೋಗಿ ಪಡಿತರ ತರಬೇಕಿತ್ತು. ಆ ಮಾಪನ ವ್ಯವಸ್ಥೆಯಲ್ಲಿ ಪಡಿತರ ದುರ್ಬಳಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಹೀಗಾಗಿ ಆ ಯಂತ್ರಗಳನ್ನೆಲ್ಲ ಇವರು ತೆಗೆದುಹಾಕಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದವರಿಗೆ ಮೂರು ರೂಪಾಯಿ ಯಿಂದ ಒಂದು ರೂಪಾಯಿಗೆ ಅಕ್ಕಿ ಕೊಡಲು ನಾವು ಯೋಜನೆ ರೂಪಿಸಿದ್ದು, ನಮ್ಮ ಅವಧಿಯ ಬಳಿಕ ಮುಖ್ಯಮಂತ್ರಿಗಳು ನಮ್ಮ ಯೋಜನೆಗೆ ಅನ್ನ ಭಾಗ್ಯ ಎಂದು ಹೆಸರಿಟ್ಟು ಉಚಿತ ಅಕ್ಕಿ ನೀಡಿದ್ದು ಅಷ್ಟೇ ಎಂದಿದ್ದಾರೆ.

Edited By : PublicNext Desk
Kshetra Samachara

Kshetra Samachara

21/11/2024 07:12 pm

Cinque Terre

380

Cinque Terre

0

ಸಂಬಂಧಿತ ಸುದ್ದಿ