ಹೆಬ್ರಿ : ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳದಲ್ಲಿ ಭದ್ರತೆಯನ್ನು ಮುಂದುವರಿಸಲಾಗಿದೆ. ಪರಿಸರದಲ್ಲಿನ ಆತಂಕದ ಸ್ಥಿತಿ ಇನ್ನೂ ದೂರವಾಗಿಲ್ಲ.ಈ ಭಾಗದಲ್ಲಿ ಒಟ್ಟು ಆರು ಮನೆಗಳಿದ್ದು ಮಲೆಕುಡಿಯ ಸಮುದಾಯದವರು ಇಲ್ಲಿ ವಾಸವಿದ್ದಾರೆ. ಘಟನೆಯು ವಿಕ್ರಂ ಗೌಡನ ಸಂಬಂಧಿಕರ ಮನೆಯ ಸಮೀಪವೇ ನಡೆದಿದೆ. ಈ ಭಾಗದಲ್ಲಿ ದಟ್ಟಕಾಡಿನ ನಡುವೆ 1 ಕಿ.ಮೀ., ಅರ್ಧ ಕಿ.ಮೀ. ಅಂತರದಲ್ಲಿ ಮನೆಗಳಿದ್ದು, ಉಳಿದ ಮನೆಯವರಲ್ಲೂ ಆತಂಕ ಮುಂದುವರಿದಿದೆ. ಎಎನ್‌ಎಫ್ ಸಶಸ್ತ್ರ ಮೀಸಲು ಪಡೆ, ಹೆಬ್ರಿ, ಅಜೆಕಾರು, ಕಾರ್ಕಳ ಪೊಲೀಸರು ಸಹಿತ ರಾಜ್ಯ ಆಂತರಿಕ ಭದ್ರತಾ ವಿಭಾಗದ ಸಿಬಂದಿಯೂ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಕೇಂದ್ರ ಗುಪ್ತಚರ ವಿಭಾಗವು ನಕ್ಸಲ್ ಚಟುವಟಿಕೆ ಮತ್ತು ಎನ್‌ಕೌಂಟರ್ ಪ್ರಕರಣದ ಮೇಲೆ ನಿಗಾ ಇರಿಸಿ ಸಮಗ್ರ ಮಾಹಿತಿಯನ್ನು ಕಲೆ ಹಾಕಿದೆ.ಎನ್‌ಕೌಂಟರ್ ಪ್ರದೇಶಕ್ಕೆ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ.
PublicNext
21/11/2024 12:13 pm