ಕೊಡಗು: ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾ ಸಾಗಾಟ ಸಾಗಾಟ ಮಾಡುತ್ತಿದ್ದ ಆರೋಪದಡಿ ಕೇರಳದ ಮೂವರು ಸೇರಿ ಐವರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಿರುವಂಗಾಡು ಗ್ರಾಮದ ಸುಜೇಶ್ ಎಂ.ಕೆ (44), ವಿರಾಜಪೇಟೆಯ ಮರೂರು ಗ್ರಾಮದ ಜಬ್ಬರ್.ಯು.ವೈ (38), ವರ್ಷ, ಮೊಹಮ್ಮದ್ ಕುಂಞ (48) ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಿಣರಾಯಿಯ ಜಂಶೀರ್ (37) ಹಾಗೂ ತಲಚೇರಿ ಜಿಲ್ಲೆಯ ಎರನ್ನೋಳಿ ಗ್ರಾಮದ ಶಮ್ಯಾಸ್.ಸಿ.ವಿ (32) ಬಂಧಿತ ಆರೋಪಿಗಳು. ಬಂಧಿತರ ಬಳಿಯಿಂದ 84 ಎಂಡಿಎಂಎ, 7 ಗ್ರಾಂ ಗಾಂಜಾ, ಒಂದು ಕಾರು, ಡಿಜಿಟಲ್ ತೂಕದ ಯಂತ್ರ ಮತ್ತು ಮಾದಕ ವಸ್ತು ಸೇವನೆಗೆ ಬಳಸುವ ಉಪಕರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
20/11/2024 06:33 pm