ಕೋಲಾರ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಗಳನ್ನು ಆಗಲೀ, ಎಪಿಎಲ್ ಕಾರ್ಡ್ ಗಳನ್ನು ಆಗಲಿ ರದ್ದು ಮಾಡಲ್ಲ. ಆದರೆ, ಕಾರ್ಡ್ ಗಳ ಪರಿಶೀಲನೆ ನಡೆಯುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪಷ್ಟನೆ ನೀಡಿದರು.
ಕೋಲಾರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಗೆ ಅರ್ಹರಲ್ಲದೆ ಇರುವವರ ಕಾರ್ಡ್ ಗಳು ಬದಲಾವಣೆ ಆಗುತ್ತದೆಯೇ ಹೊರತು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಅರ್ಹರಲ್ಲದವರನ್ನು ಎಪಿಎಲ್ ಕಾರ್ಡ್ ಗೆ ಬದಲಾವಣೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇಕಡಾ 50ಕ್ಕೂ ಅಧಿಕ ಬಿಪಿಎಲ್ ಕಾರ್ಡುಗಳು ಇಲ್ಲ. ಕರ್ನಾಟಕ ಆರ್ಥಿಕವಾಗಿ ಸುಭದ್ರವಿರುವ ರಾಜ್ಯ. ದೇಶದಲ್ಲೇ ತೆರಿಗೆ ಪಾವತಿಯಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ರಾಜ್ಯದಲ್ಲಿ 75ರಿಂದ 80 ಪರ್ಸೆಂಟ್ ಬಿಪಿಎಲ್ ಕಾರ್ಡ್ ಇರೋದಕ್ಕೆ ಸಾಧ್ಯವಾ? ಎಂದು ಹೇಳಿದರು.
PublicNext
20/11/2024 05:36 pm