ತರೀಕೆರೆ : ಪಟ್ಟಣದ ಬೀರೂರು - ಅಜ್ಜಂಪುರ ಪಟ್ಟಣ ವ್ಯಾಪ್ತಿ ರಸ್ತೆ ವಿಸ್ತರಣೆ ಮಾಡುವ ವೇಳೆ ಪರಿಹಾರ ಪಡೆದವರೇ ಮತ್ತೆ ರಸ್ತೆ ಅತಿಕ್ರಮಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆಂದು ಆರೋಪಿಸಿ ದಲಿತ ಪರ ಸಂಘಟನೆಗಳು ಪುರಸಭೆ ಮುಂದೆ ಇಂದು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಚಂದ್ರಶೇಖರ್ ರಸ್ತೆಯನ್ನು ಮೊದಲಿಗಿಂತ ಕಿರಿದಾಗಿಸಿದ್ದು, ಪಾದಚಾರಿ ರಸ್ತೆ ನಿರ್ಮಿಸಿಲ್ಲ. ಪಾದಚಾರಿಗಳು ತೆರಳುವ ಮಾರ್ಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿ ಜನ ರಸ್ತೆ ಮೇಲೆ ಓಡಾಡುವಂತಾಗಿದ್ದು, ಪಾದಚಾರಿಗಳಿಗೆ ಅಪಘಾತಗಳಾದರೆ ಪುರಸಭೆಯೇ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು ..
Kshetra Samachara
20/11/2024 04:11 pm