ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಚುನಾವಣೆ - ಬಂದೂಕುಗಳ ಠೇವಣೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮಪಂಚಾಯಿತಿ ಸದಸ್ಯ ಸ್ಥಾನಗಳಿಗೆ ನವೆಂಬರ್ 23 ರಂದು ಉಪಚುನಾವಣೆ ನಡೆಯಲಿದ್ದು, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಹಾಗೂ ಮತದಾನದ ದಿನದಂದು ಮತದಾರರಿಗೆ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಮತ್ತು ಮತದಾನವನ್ನು ಸುಗಮವಾಗಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮವಹಿಸಲು ಹಾಗೂ ವ್ಯವಸ್ಥಿತ ಮತದಾನ ನಡೆಸುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು 14-ಆಲ್ದೂರು, ತರೀಕೆರೆ 7-ಕರಕುಚ್ಚಿ, 5ಮುಡುಗೋಡು, 23-ಹುಣಸಘಟ್ಟ, ಕಡೂರು ಪಟ್ಟಣಗೆರೆ, ಕಲ್ಕೆರೆ, ನರಸಿಂಹರಾಜಪುರ 5-ಮುತ್ತಿನಕೊಪ್ಪ, ಕೊಪ್ಪ 19-ಅಗಳಗಂಡಿಯಲ್ಲಿ ಅಧಿಕೃತವಾಗಿ ಆಯುಧಗಳನ್ನು ಅಧಿಕೃತ ಪರವಾನಗಿಗಳನ್ನು ಹೊಂದಿರುವ ವಹಿವಾಟುದಾರರು ತಮ್ಮ ತಮ್ಮ ವ್ಯಾಪ್ತಿಯ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಚುನಾವಣೆ ಮುಗಿಯುವವರೆಗೂ ಶಸ್ತ್ರಾಸ್ತ್ರ ಮತ್ತು ಬಂದೂಕುಗಳನ್ನು ಠೇವಣಿ ಇಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಆದೇಶ ಹೊರಡಿಸಿದ್ದಾರೆ.

Edited By : PublicNext Desk
PublicNext

PublicNext

20/11/2024 03:59 pm

Cinque Terre

12.51 K

Cinque Terre

0

ಸಂಬಂಧಿತ ಸುದ್ದಿ