ಕಾಗವಾಡ : ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಶ್ರೀ ವಿಠ್ಠಲ ಮಂದಿರದಲ್ಲಿ ಉಗಾರ ಗ್ರಾಮದ ಧಪೇದಾರ ಎಂಬ ಮುಸ್ಲಿಂ ಕುಟುಂಬದ ವಿವಾಹ ಸಂಭ್ರಮ ಗಮನ ಸೆಳೆಯಿತು. ಜಾತಿ-ಜಾತಿಗಳಲ್ಲಿ ದ್ವೇಷ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ ವಿಠ್ಠಲ ಮಂದಿರದಲ್ಲಿ ದಫೇದಾರ ಕುಟುಂಬದ ಮದುವೆ ಸಮಾರಂಭ ಭಾವೈಕ್ಯತೆ ಸಾರುವ ಮೂಲಕ ವಿಶೇಷ ಎನಿಸಿತು.
ಉಗಾರ ಬುದ್ರಕ್ ಗ್ರಾಮವು ಯಾವಾಗಲೂ ಭಾವೈಕ್ಯತೆ ಮತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಾ ಬಂದಿದ್ದು, ಇತ್ತಿಚಿಗೆ ಮುಸ್ಲಿಂ ಬಾಂಧವರು ಹಿಂದೂಗಳೊಂದಿಗೆ ಸೇರಿ ಗಣೇಶ ಚತುರ್ಥಿಯಲ್ಲಿ ಗಣೇಶನ್ನು ಪ್ರತಿಷ್ಠಾಪಿಸಿ, ಭಾವೈಕ್ಯತೆ ಮೆರೆದಿದ್ದರು. ಈಗ ಗ್ರಾಮದ ಮರಾಠಾ ಸಮಾಜ ಬಾಂಧವರು ಶ್ರೀ ವಿಠ್ಠಲ ಮಂದರದಲ್ಲಿ ದಫೇದಾರ ಕುಟುಂಬದ ಮದುವೆ ಸಮಾರಂಭಕ್ಕೆ ಸ್ಥಳ ನೀಡಿ, ಭಾವೈಕ್ಯತೆ ಸಾರುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ.
ಉಗಾರ ಗ್ರಾಮದ ಅಬ್ಬಾಸ ದಫೇದಾರ, ಮಾಸಾಯಿ ದಫೆದಾರ ದಂಪತಿಯ ದ್ವಿತೀಯ ಸುಪುತ್ರ ಸಲ್ಮಾನ ಮತ್ತು ಶೀರಿನ ಇವರ ಶುಭ ವಿವಾಹವು ಇಲ್ಲಿ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿದೆ.
PublicNext
20/11/2024 02:38 pm