ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು:ಡಬ್ಬಲ್‌ ಚೋಲ್‌ ಧಾರಣೆ ಏರಿಕೆ

ಪುತ್ತೂರು: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್ ಚೋಲ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ.

ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ.

ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್ ಧಾರಣೆ 510ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505ರಿಂದ 510 ರೂ. ಇತ್ತು. ಕ್ಯಾಂಪ್ಲೋ ಮಾರುಕಟ್ಟೆಯಲ್ಲಿ 500 . .

ನ. 15 ರಂದು ಕ್ಯಾಂಪ್ಲೋಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂ., ಸಿಂಗಲ್ ಚೋಲ್ ಧಾರಣೆ 420 ರೂ. ತನಕ ಇತ್ತು. ಕಳೆದ ಮೂರು ದಿನಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್ ಚೋಲ್ ಧಾರಣೆ 10 ರೂ.ನಷ್ಟು ಏರಿಕೆ ಕಂಡಿದೆ. ಅಂದರೆ ಹೊಸ

ಅಡಿಕೆ ಕೆ.ಜಿ.ಗೆ 335 ರೂ., ಸಿಂಗಲ್ ಚೋಲ್. ಧಾರಣೆ ಕೆ.ಜಿ.ಗೆ 430 ರೂ.ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 350 -355 ., ಸಿಂಗಲ್ ಚೋಲ್ ថ 435-438 . ತನಕ ಇತ್ತು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ ಒ) * ಅಂಗಸಂಸ್ಥೆ ಇಂಟರ್‌ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸ‌ರ್ (ಐಎಆರ್‌ಸಿ) 2024ರ ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಹೇಳಲಾಗಿದ್ದು ಆದರೆ ಈ ವಿಚಾರ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಡಿಕೆ ಬೇಡಿಕೆ ಸೃಷ್ಟಿಯಾಗಿ ಧಾರಣೆ ಏರಿಕೆ ಕಂಡಿರುವುದು ಇದಕ್ಕೆ ನಿರ್ದಶನ ಎನ್ನುತ್ತಿದೆ. ಮಾರುಕಟ್ಟೆ ಮೂಲಗಳು.

Edited By : PublicNext Desk
Kshetra Samachara

Kshetra Samachara

20/11/2024 11:37 am

Cinque Terre

1.95 K

Cinque Terre

0

ಸಂಬಂಧಿತ ಸುದ್ದಿ