ಸುಳ್ಯ : ಸಮೀಪದ ಉಬರಡ್ಕ ಗ್ರಾಮದ ಭಾಗದಲ್ಲಿದ್ದ ಕಾಡಾನೆಗಳು ಮರ್ಕಂಜ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು ಹೈದಂಗೂರು-ಕೊರತ್ತೋಡಿ ಭಾಗದಲ್ಲಿ ಬೀಡು ಬಿಟ್ಟಿದೆ.
ಮೈಸೂರು ಕಡೆಗೆ ಬಾಡಿಗೆ ಹೋಗಿದ್ದ ವ್ಯಾನ್ ನ.17ರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ಮರಳಿ ಮರ್ಕಂಜ ಬಳಿಯ ಮಿತ್ತಡ್ಕದ ತನ್ನ ಮನೆಗೆ ಬರುತ್ತಿದ್ದಾಗ ಹೈದಂಗೂರು ರಸ್ತೆಯ ಮಧ್ಯೆ 2 ಕಾಡಾನೆಗಳು ವಾಹನಕ್ಕೆ ತಡೆಯೊಡ್ಡಿದೆ.
ಈ ವೇಳೆ ವ್ಯಾನ್ ಮಾಲಕ ನಾಗರಾಜ್ ಹೆಡ್ ಲೈಟ್ ಆಫ್ ಮಾಡಿ ನಿಲ್ಲಿಸಿದ್ದರು. ಸುಮಾರು 10 ನಿಮಿಷದ ಬಳಿಕ ಕಾಡಾನೆಗಳು ರಸ್ತೆಯಿಂದ ಕಾಡೊಳಗೆ ಇಳಿದು ಹೋದ ಬಳಿಕ ನಾಗಾರಾಜ್ ತಮ್ಮ ವಾಹನವನ್ನು ಚಲಾಯಿಸಿದ್ದಾರೆ.
Kshetra Samachara
20/11/2024 11:30 am