ಸುರತ್ಕಲ್ : ಪಾಲಿಕೆ ನೀರು ಪೂರೈಕೆ ವಿಭಾಗದ ಕುಳಾಯಿ ಪಂಪ್‌ಹೌಸ್‌ನ ಭೂಗತ ಟ್ಯಾಂಕ್ ಮೇಲಿನ ಕಾಂಕ್ರೀಟ್ ಚಾವಣಿ ಶನಿವಾರ ತಡರಾತ್ರಿ ಕುಸಿದಿದೆ. ಸುಮಾರು 40 ವರ್ಷ ಹಿಂದೆ ನಿರ್ಮಿಸಲಾಗಿರುವ ಕಾರಣ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದು ಸ್ಲ್ಯಾಬ್
ಬಿರುಕು ಬಿಟ್ಟಿರುವುದು ಕುಸಿತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಈ ಸಂದರ್ಭ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಯಾರಿಗೂ ಏನೂ ಆಗಿಲ್ಲ ಎನ್ನಲಾಗಿದೆ.
ಮಂಗಳೂರು ಮಹಾ ನಗರಪಾಲಿಕೆಯ ಕುಳಾಯಿ ಪಂಪ್ ಹೌಸ್ ಸುರತ್ಕಲ್ ಭಾಗಕ್ಕೆ ಪಣಂಬೂರು ಪಂಪ್ ಹೌಸ್‌ನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು ಈ ಟ್ಯಾಂಕ್‌ನಿಂದ ಕಾನ, ಕುಳಾಯಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು ಟ್ಯಾಂಕ್ ದುರಸ್ತಿಗೆ ಅನೇಕ ವರ್ಷಗಳಿಂದ ಸ್ಥಳೀಯರು ಒತ್ತಾಯಿಸುತ್ತಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ.
ಪಕ್ಕದಲ್ಲಿ ಹೊಸ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮಳೆ ಇತ್ಯಾದಿಯಿಂದ ವಿಳಂಬವಾಗಿತ್ತು. ಈಗ ಟ್ಯಾಂಕ್‌ಗೆ ಬಾರದೆ ನೇರವಾಗಿ ಪೈಪ್‌ಲೈನ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
18/11/2024 08:09 pm