ಬೆಳ್ತಂಗಡಿ : ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸ್ಥಳದಲ್ಲಿರವಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಸವಾರಿ ನಡೆಸಿದೆ. ಜನನಿಬಿಡ ಪ್ರದೇಶದ ಮೂಲಕ ತೆರಳಿದ ಬಳಿಕ ಹೊಸಮಠ ಕಡೆಗೆ ಹೋಗಿದೆ.
ಕೃಷಿ ಅಥವಾ ಇತರ ಯಾವುದೇ ಪ್ರದೇಶಕ್ಕೂ ಹಾನಿ 'ಮಾಡಿಲ್ಲ. ಚಾರ್ಮಾಡಿ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಪದೇ ಪದೇ ಕಾಡಾನೆಗಳ ದಾಳಿಯಾಗುತ್ತಲೆ ಇದ್ದು ಆ ಭಾಗದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಸರಕಾರ ಸೂಕ್ತ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಆಗಮಿಸಿ ಪರಿಶೀಲನೆ ನಡೆಸಿದೆ.
Kshetra Samachara
18/11/2024 07:41 pm