ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಶನಿವಾರಸಂತೆ ಸರಣಿ ಕಳ್ಳತನ ಆರೋಪಿ ಅಂದರ್

ಕೊಡಗು ಜಿಲ್ಲೆ ಶನಿವಾರಸಂತೆಯ ವಿವಿಧ ದೇವಾಲಯಗಳ ಹುಂಡಿ ಹಣ ಕಳ್ಳತನ ಪ್ರಕರಣದ ಆರೋಪಿಯನ್ನು ಶನಿವಾರಸಂತೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ತಣ್ಣೀರುಹಳ್ಳ ವಿಜಯನಗರ ಮೂಲದ ಮುಬಾರಕ್ ಪಾಶ (34) ಬಂಧಿತ ಆರೋಪಿಯಾಗಿದ್ದಾನೆ. 2 ವಾರಗಳ ಹಿಂದೆ ಶನಿವಾರ ಸಂತೆಯ ಶ್ರೀವಿಜಯ ವಿನಾಯಕ ದೇವಾಲಯ, ಶ್ರೀರಾಮ ಮಂದಿರದಲ್ಲಿ ಹಾಗೂ ಕೊಡ್ಲಿಪೇಟೆಯ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಹುಂಡಿಗಳ ಹಣ ಒಟ್ಟು 30,777 ರೂಪಾಯಿ ಕಳ್ಳತನವಾಗಿತ್ತು. ಆಡಳಿತ ಮಂಡಳಿಯ ದೂರಿನ ಅನ್ವಯ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತ ಮುಬಾರಕ್ ಕಳ್ಳತನವನ್ನು ವೃತ್ತಿಯಾಗಿಸಿಕೊಂಡಿದ್ದ. ಹಾಸನ, ಮಂಡ್ಯ, ಮೈಸೂರಿನ ವಿವಿಧೆಡೆ ಕಳ್ಳತನ ಮಾಡಿ ಜಾಮೀನು ಪಡೆದು ಬಿಡುಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಕಳ್ಳತನ ಮುಂದುವರಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಕಳ್ಳತನ ಮಾಡಿದ್ದ 30,777 ರೂಪಾಯಿ ನಗದು ಹಾಗೂ 2 ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Edited By : Manjunath H D
PublicNext

PublicNext

19/11/2024 11:29 am

Cinque Terre

35.63 K

Cinque Terre

1

ಸಂಬಂಧಿತ ಸುದ್ದಿ