ಗದಗ : ಪೆಟ್ರೋಲ್ ಬಂಕ್ನಲ್ಲಿ ಮರಳಿ ಚಿಲ್ಲರೆ ಕೊಡುವ ವಿಚಾರಕ್ಕೆ ಯುವಕರು ವಾಗ್ವಾದ ನಡೆಸಿ ಪರಸ್ಪರ ಬಡಿದಾಡಿಕೊಂಡ ಘಟನೆ ಗದಗ ತಾಲೂಕಿನ ಹರ್ತಿ ಬಳಿ ಇರುವ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ.
ಪೆಟ್ರೋಲ್ ಬಂಕ್ ಸಿಬ್ಬಂದಿಗಳಾದ ಮಾಹಾಂತೇಶ ಹೊನ್ನಪ್ಪನವರ್ ಹಾಗೂ ರವಿ ಬಂಡಿವಡ್ಡರ್ ಎಂಬುವವರನ್ನು ಹರ್ತಿ ಗ್ರಾಮದ ಹಲವು ಯುವಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಓರ್ವ ಗ್ರಾಹಕನು ತನ್ನ ಬೈಕಿಗೆ 100 ರೂಪಾಯಿ ಕೊಟ್ಟು 50 ರೂಪಾಯಿ ಪೆಟ್ರೋಲ್ ಹಾಕಿಸಿದ್ದಾನೆ. ಇನ್ನುಳಿದ 50 ರೂಪಾಯಿ ಕೊಡಲು ಚೆಂಜ್ ಇಲ್ಲಾ ಎಂದಾಗ ಮಾತಿಗೆ ಮಾತು ಬೆಳೆದು, ಬಂಕ್ ಸಿಬ್ಬಂದಿಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಗದಗ
PublicNext
18/11/2024 10:31 pm