ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯ

ಗದಗ: ಆಸ್ತಿಯ ವಿವಾದದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಗದಗ ತಾಲೂಕಿನ ಕಣವಿ ಗ್ರಾಮದಲ್ಲಿ ನಡೆದಿದೆ.

ಕಣವಿ ಗ್ರಾಮದ ಮಲೀಕ್ ಸಾಬ್ ಕಿಲ್ಲೆದಾರ ಎಂಬ ವ್ಯಕ್ತಿಯು ಮನೆಯನ್ನು ಕಟ್ಟುತ್ತಿದ್ದರು. ಜೈಬುನ್ನಿಸಾ ಕಿಲ್ಲೆದಾರ ಎಂಬ ಮಹಿಳೆಯು ಈ ಜಾಗವು ನನಗೆ ಸೇರಿದ್ದು, ನೀವು ಇಲ್ಲಿ ಮನೆಯನ್ನು ಕಟ್ಟಬೇಡಿ ಎಂದು ಪಟ್ಟುಹಿಡಿದಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಈ ಜಗಳವೂ ಕೊಲೆಯಲ್ಲಿ ಅಂತ್ಯವಾಗಿದೆ.

ಆರೋಪಿ ಮಲೀಕ್ ಸಾಬ್ ಕಿಲ್ಲೆದಾರ ಕೊಲೆಯ ಬಳಿಕ ನೇರವಾಗಿ ಮುಳಗುಂದ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಅಲ್ಲಿನ ಸಿಬ್ಬಂದಿಯೂ ಆತನನ್ನು ಬಂಧಿಸಿದ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹವನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಗದಗ

Edited By : Vinayak Patil
PublicNext

PublicNext

15/11/2024 09:35 pm

Cinque Terre

45.68 K

Cinque Terre

2

ಸಂಬಂಧಿತ ಸುದ್ದಿ