ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಗಾಂಜಾ ಬೆಳೆ ಇದ್ದ ಜಮೀನಿನ ಮೇಲೆ ಅಬಕಾರಿ ಅಧಿಕಾರಿಗಳಿಂದ ದಾಳಿ ನಡೆಸಿದ್ದು, 10 ಸಾವಿರ ರೂಪಾಯಿ ಮೌಲ್ಯದ 270 ಗ್ರಾಂ ತೂಕದ ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿದ್ದಾರೆ.
ಕಡಕೋಳ ಗ್ರಾಮದ ಮಲಕಾಜಪ್ಪ ಬಸವಣ್ಣೆಪ್ಪ ತುದಿಗಾಲ ಎಂಬುವರ ಜಮೀನಿನಲ್ಲಿ ಗಾಂಜಾ ಗಿಡ ಇರುವ ಬಗ್ಗೆ ಅಬಕಾರಿ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹೂ, ಎಲೆ ತೆನೆ, ಕಾಯಿ, ಕಾಂಡಗಳಿಂದ ಕೂಡಿದ್ದ 2 1/2 ಅಡಿಯ 2 ಗಾಂಜಾ ಗಿಡಗಳು ಹಾಗೂ 1/2 ಅಡಿಯ 3 ಗಾಂಜಾ ಗಿಡಗಳು ಸೇರಿ ಒಟ್ಟು 5 ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಮೀನಿನ ಮಾಲೀಕ ಮಲಕಾಜಪ್ಪ ಪರಾರಿಯಾಗಿದ್ದು, ಅವರ ಪತ್ತೆಗೆ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶಿರಹಟ್ಟಿ ವಲಯದ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
PublicNext
12/11/2024 07:59 pm