ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮವಾಗಿ ಮರಳುಗಾರಿಕೆ - ಅಧಿಕಾರಿಗಳಿಗಿಲ್ಲ ತಡೆಯುವ ಎದೆಗಾರಿಕೆ

ಗದಗ: ಲಕ್ಷ್ಮೇಶ್ವರ ಪಟ್ಟಣದಲ್ಲಿ ಮರಳು ಮಾಫಿಯಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ತಾವು ಮಾಡಿದ್ದೇ ನಿಯಮ, ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ಈ ಮರಳುದಂಧೆಕೋರರು ವರ್ತಿಸುತ್ತಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಮರಳು ದಂಧೆಕೋರರ ಅಡ್ಡೆಯಾಗಿ ಬದಲಾವಣೆಗೊಂಡಿದೆ.

ರಾತ್ರಿ-ಹಗಲೆನ್ನದೆ ಟ್ರ್ಯಾಕ್ಟರ್ ಹಾಗೂ ಲಾರಿಗಳ ಮೂಲಕ ಹುಲ್ಲೂರ ಗ್ರಾಮದಲ್ಲಿ ಮರಳು ಸಾಗಿಸುತ್ತಿದ್ದಾರೆ. ಇವರು ಬಿಳಿ ಶರ್ಟ್ ಹಾಕಿಕೊಂಡು ರಾಜಕೀಯ ಪಕ್ಷಗಳು, ಮುಖಂಡರ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಯಾವ ಅಧಿಕಾರಿಗಳೂ ಇವರ ಅಕ್ರಮವನ್ನು ಪ್ರಶ್ನಿಸಲು ಮುಂದೆ ಬರುತ್ತಿಲ್ಲ.

ಒಂದೆಡೆ ರೈತರ ಜಮೀನುಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ಹಳ್ಳ ಕೊಳ್ಳವನ್ನು ಈ ಮರಳುಗಳ್ಳರು ಲೂಟಿ ಹೊಡೆಯುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ, ಪ್ರತಿಪಕ್ಷಗಳು ಮಾತ್ರ ಏನೂ ನಡೆದಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಇವರಿಗೂ ಈ ಅಕ್ರಮಗಳಲ್ಲಿ ಪಾಲಿದೆಯೇ ಎನ್ನುವ ಸಂಶಯವೂ ಮೂಡುತ್ತಿದೆ.

ಸುರೇಶ ಎಸ್ ಲಮಾಣಿ, ಪಬ್ಲಿಕ್ ನೆಕ್ಸ್ಟ್ ಗದಗ

Edited By : Ashok M
PublicNext

PublicNext

12/11/2024 08:00 pm

Cinque Terre

29.99 K

Cinque Terre

0

ಸಂಬಂಧಿತ ಸುದ್ದಿ