ಮುಂಬೈ: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಂತೆಯೇ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ನೆನಪಿನ ಶಕ್ತಿ ಕಡಿಮೆ ಆಗಿದೆ. ಅವರು ಹೋಗಿ ಬಂದಲ್ಲೆಲ್ಲ ನಾನು ಮತ್ತು ನನ್ನ ಸಹೋದರಿ ಮಾತನಾಡಿದ್ದನ್ನೇ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ನಾವು ಪ್ರಸ್ತಾಪಿಸಿದ್ದನ್ನೇ ಮೋದಿ ಪ್ರಸ್ತಾಪಿಸುತ್ತಿದ್ದಾರೆ. ಜೋ ಬೈಡನ್ಗೆ ಮರೆವಿನ ಕಾಯಿಲೆ ಇದ್ದಂತೆ ಮೋದಿಗೂ ಮರೆವಿನ ಕಾಯಿಲೆ ಇದೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.
PublicNext
16/11/2024 08:32 pm