ಮುಂಬೈ : ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಸೌದಿ ಅರೇಬಿಯಾದಲ್ಲಿ ನವೆಂಬರ್ 24 ಮತ್ತು 25ರಂದು ಐಪಿಎಲ್ ಕ್ರಿಕೆಟಿಗರ ಹರಾಜು ನಡೆಯಲಿದೆ. ಎಲ್ಲಾ ಹತ್ತು ತಂಡಗಳು ತಮಗೆ ಬೇಕಾದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಲಿದೆ.
ಒಟ್ಟು 1,574 ಮಂದಿ ಆಟಗಾರರು ತಮ್ಮ ಹೆಸರನ್ನು ಹರಾಜಿಗಾಗಿ ನೋಂದಾಯಿಸಿ ಕೊಂಡಿದ್ದರು. ಇದೀಗ ಆಟಗಾರರ ಸಂಖ್ಯೆಯನ್ನು 574ಕ್ಕೆ ಸೀಮಿತಗೊಳಿಸಲಾಗಿದೆ.
574 ಆಟಗಾರರಲ್ಲಿ 366 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶಿಯರು. ಒಟ್ಟು 10 ತಂಡಗಳು 204 ಸ್ಥಾನಗಳನ್ನು ತುಂಬಬೇಕಿದೆ.
ಹರಾಜಿನಲ್ಲಿ ಭಾರತದ 48 ಹಾಗೂ ವಿದೇಶದ 193 ಕ್ಯಾಪ್ಡ್ ಆಟಗಾರರು; ಭಾರತದ 318 ಹಾಗೂ ವಿದೇಶದ 12 ಅನ್‌ಕ್ಯಾಪ್ಡ್ ಆಟಗಾರರು; ಮೂವರು ಅಸೋಸಿಯೇಟ್ ಆಟಗಾರರಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಕರ್ನಾಟಕದ 24 ಮಂದಿ ಆಟಗಾರರು ಭಾಗಿಯಾಗಲಿದ್ದಾರೆ. ಕೆ.ಎಲ್.ರಾಹುಲ್, ದೇವದತ್ತ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಪ್ರಸಿದ್ ಕೃಷ್ಣ, ಲವ್ನಿತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್.ಚೇತನ್, ಮನೋಜ್ ಭಾಂಡಗೆ, ಅಭಿಲಾಶ್ ಶೆಟ್ಟಿ, ವೈಶಾಖ್ ವಿಜಯ್ ಕುಮಾರ್, ಪ್ರವೀಣ್ ದುಬೆ, ಕೆ.ಗೌತಮ್, ಮನ್ವಂತ್ ಕುಮಾರ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮನೋಹರ್, ಬಿ.ಆರ್.ಶರತ್, ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಈ ಬಾರಿ ಐಪಿಎಲ್ ಹರಾಜಿನ ಭಾಗವಾಗಲಿದ್ದಾರೆ.
PublicNext
16/11/2024 12:56 pm