ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಹೈಟೆಕ್ ರೈತರಿಗೆ ಸರ್ಕಾರಿ ಭೂಮಿ ಹಂಚಿಕೆ- ಗೌಪ್ಯ ಸಭೆ ನಡೆಸಿದ ಡಾ.ಯತೀಂದ್ರ ಸಿದ್ದರಾಮಯ್ಯ!

ನಂಜನಗೂಡು: ಮುಡಾ ಹಗರಣ ಮಾಸುವ ಮುನ್ನವೇ ನಂಜನಗೂಡಿನಲ್ಲಿ ಮತ್ತೊಂದು ಎಡವಟ್ಟಿಗೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ‌ ಕೈ ಹಾಕಿದ್ದಾರೆ. ಹಳ್ಳಿಗೆ ಗುಡ್ ಬೈ ಹೇಳಿ ಪಟ್ಟಣ ಸೇರಿರುವ ಹೈಟೆಕ್ ರೈತರಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಮುಂದಾಗಿದ್ದಾರೆ.

ನಂಜನಗೂಡು ನಗರದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಗೌಪ್ಯ ಸಭೆ ಮಾಡಲಾಗಿದೆ. ವರುಣಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸದಸ್ಯರ ಜೊತೆಗೂಡಿ ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕರ್ತರನ್ನು ಗುರುತಿಸಿ ಸರ್ಕಾರಿ ಭೂಮಿ ಹಂಚಿಕೆ ಮಾಡಲು ನಡೆಸುತ್ತಿರುವ ಗೌಪ್ಯ ಸಭೆಯ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.

ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಹೆಬ್ಬೆ ರಾಜು, ಜಯಲಕ್ಷ್ಮಿ, ಪ್ರಸಾದ್ ಮೆಲ್ಲಹಳ್ಳಿ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ನೇತೃತ್ವದಲ್ಲಿ ಗೌಪ್ಯ ಸಭೆ ನಡೆಸಲಾಗಿದ್ದು, ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಜನರಿಂದ ಆಯ್ಕೆ ಆದ ಜನಪ್ರತಿನಿಧಿಯಿಂದ ಗೌಪ್ಯ ಸಭೆ ಮಾಡುವ ಅಗತ್ಯವೇನು? ಪತ್ರಕರ್ತರು ಮತ್ತು ರೈತರನ್ನು ಹೊರಗಿಟ್ಟು ಬಾಗಿಲು ಹಾಕಿಕೊಂಡು ಉಳ್ಳವರಿಗೆ ಮತ್ತು ಪಟ್ಟಣದಲ್ಲಿ ವಾಸ ಮಾಡುವವರಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?

ಈ ಗೌಪ್ಯ ಸಭೆಯ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ರೈತ ಸಂಘ ಮುಂದಾಗುತ್ತದೆ. ಉಳುಮೆ ಮಾಡುವ ನಿಜವಾದ ರೈತರಿಗೆ ಭೂಮಿ ನೀಡುತ್ತಿಲ್ಲ. ಪಟ್ಟಣದಲ್ಲಿ ವಾಸ ಮಾಡುವ ಹಣವುಳ್ಳ ಹೈಟೆಕ್ ರೈತರಿಗೆ ಸರ್ಕಾರಿ ಭೂಮಿ ಹಂಚಿಕೆ ಮಾಡುವುದು ಖಂಡನೀಯ. ರೈತ ಸಂಘ ಮತ್ತು ಪ್ರಗತಿಪರ ಸಂಘಟಕರ ಜೊತೆಗೂಡಿ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಸತೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Suman K
PublicNext

PublicNext

16/11/2024 06:22 pm

Cinque Terre

32.68 K

Cinque Terre

1

ಸಂಬಂಧಿತ ಸುದ್ದಿ