ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾನುವಾರು ಮೇಲೆ ಹುಲಿ ದಾಳಿ : ಅರಣ್ಯ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು

ನಂಜನಗೂಡು : ನಂಜನಗೂಡು ತಾಲ್ಲೂಕಿನ ನಾಗಣಾಪುರ ಕಾಲೋನಿಯಲ್ಲಿ ಜಾನುವಾರು ಮೇಲೆ ಹುಲಿ ದಾಳಿ ನಡೆಸಿ ಕೊಂದು ತಿಂದು ಹಾಕಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯ ವ್ಯಾಪ್ತಿಯಲ್ಲಿ ಪದೇ ಪದೇ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಹುಲಿ ಮಹಿಳೆಯನ್ನು ಕೊಂದು ಹಾಕಿತ್ತು.

ಈಗ ಮತ್ತೆ ಹುಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಪರಿಶೀಲನೆಗೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಗ್ರಾಮದ ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮಿಂದ ಹುಲಿಯನ್ನು ಕಾಡಿಗಟ್ಟಲು ಸಾಧ್ಯವಿಲ್ಲ ಅಂದ್ರೆ ನಾವೇ ಓಡಿಸುತ್ತೇವೆ.

ಹುಲಿ ದಾಳಿಯಿಂದ ಯಾರಾದರೂ ಸತ್ತ ಮೇಲೆ ಬಂದು ನಾನು ಮೌನಾಚರಣೆ ಮಾಡೋದು ಬೇಡ, ನಾಳೆ ನೀವು ಬಂದು ಪರಿಹಾರ ಕೊಡುವುದು ಬೇಡ. ನೀವು ಹುಲಿ ಬಗ್ಗೆ ಓದಿಕೊಂಡಿದ್ದೀರಾ. ನಾವು ಅನುಭವಿಸುತ್ತಿದ್ದೇವೆ.

ನಿಮ್ಮ ಕೈಯಲ್ಲಿ ಶಾಶ್ವತ ಪರಿಹಾರ ಕೊಡಲು ಸಾಧ್ಯವಿಲ್ಲ. ಈಗ ಮತ್ತೆ ಜಾನುವಾರು ಮೇಲೆ ದಾಳಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

Edited By : Suman K
Kshetra Samachara

Kshetra Samachara

19/11/2024 12:47 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ