ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನ ಸರ್ಕಾರ ಕೆಲವು ವರ್ಷಗಳ ಹಿಂದೆ ದಾನೇಶ್ವರಿ ಎಂಬ ಖಾಸಗಿ ಸಂಸ್ಥೆಗೆ ನಡೆಸಲು ಕೊಟ್ಟಿತ್ತು. ನಿಯಮದ ಪ್ರಕಾರ ಜೂನ್ 2023 ಕ್ಕೆ ಈ ಸಂಸ್ಥೆಯ ಕಾಂಟ್ರ್ಯಾಕ್ಟ್ ಮುಗಿದಿರುತ್ತದೆ. ಇವರ ಕಾಂಟ್ರಾಕ್ಟ್ ಅವಧಿ ಮುಗಿದಿದ್ದರೂ ಕಳೆದ 15 ತಿಂಗಳಿಂದ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಆದರೆ ಅವಧಿ ಮುಗಿದಿದ್ದರಿಂದ ಸರ್ಕಾರ ಸಿಬ್ಬಂದಿ ಸಂಬಳ ತಡೆಹಿಡಿಯಲಾಗಿದೆ. ಈ ಕಾಂಟ್ರಾಕ್ಟ್ ತಮಗೆ ಮುಂದುವರೆಯುತ್ತದೆ ಎಂದು ತಿಳಿದು ದಾನೇಶ್ವರಿ ಸಂಸ್ಥೆಯು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ ಸಂಬಳ ಬರದೇ ಇರುವುದರಿಂದ ನವೆಂಬರ್ ಒಂದನೇ ತಾರೀಖಿನಿಂದ ವೈದ್ಯರು ಕೆಲಸ ಬಿಟ್ಟಿದ್ದಾರೆ.
ಇದರಿಂದ 58 ಹಳ್ಳಿಯ ರೋಗಿಗಳು ಸೇವೆ ಸಿಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಾರ್ವಜನಿಕರು ರಸ್ತೆಗಿಳಿದು ಧರಣಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿ S S ಗಡೇದ ಕುಂಟು ನೆಪ ಹೇಳಿದ್ದು, ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು 58 ಹಳ್ಳಿಗಳಲ್ಲಿ ಯಾರಾದರೂ ಸತ್ತರೆ ಅದಕ್ಕೆ ನೀವೆ ಹೊಣೆಯಾಗುತ್ತೀರಿ ಎಂದು ಗದರಿಸಿದಾಗ ಪ್ರಕರಣ ನ್ಯಾಯಾಲಯದಲ್ಲಿ ಇಥ್ಯರ್ತ ಆಗುವವರೆಗೆ ಒಬ್ಬ ಸರ್ಕಾರಿ ವೈದ್ಯರನ್ನು ನಿಯೋಜನೆ ಮಾಡುವುದಾಗಿ ಭರವಸೆ ಕೊಟ್ಟರು.
ವರದಿ ನಾಗೇಶ್ ನಾಯ್ಕರ್, ಪಬ್ಲಿಕ್ ನೆಕ್ಸ್ಟ್, ಖಾನಾಪೂರ
PublicNext
14/11/2024 02:51 pm