ಬೈಲಹೊಂಗಲ: ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ಸುಚಿತ್ವ ಕಾಪಾಡುವುದರೊಂದಿಗೆ ಹಣ್ಣು ಹಂಪಲ, ನೆನೆಸಿದ ದ್ವಿದಳ ದಾನ್ಯ ಹಾಗೂ ಪೌಷ್ಟಿಕ ಅಹಾರ ಸೇವನೆ ಮಾಡಬೇಕು ಎಂದು ಆಯುಷ್ ವೈದ್ಯಾಧಿಕಾರಿ ಡಾ. ಆರ್.ಎಸ್. ಬಾಳಿಕಾಯಿ ಹೇಳಿದರು.
ಅವರು ಸೋಮವಾರ ಸಮೀಪದ ಮುರಗೋಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ. ವತಿಯಿಂದ ಆಯೋಜಿಸಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಆಗಾಗ ನೀರು ಕುಡಿಯುತ್ತಿರಬೇಕಿದ್ದು, ಅತಿಯಾದ ಮೊಬೈಲ್ ಬಳಕೆ ಮಾಡಬಾರದು. ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಮನವರಿಕೆ, ಸಾಂಕ್ರಾಮಿಕ ರೋಗ ಮತ್ತು ಅಸಾಂಕ್ರಾಮಿಕ ರೋಗಗಳ ಹತೋಟಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಪಾಲಾಕ್ಷಿ ಮುಳಗುಂದ ಮಾತನಾಡಿ, ಗರ್ಭಿಣಿ, ಬಾನಂತಿರು ಮತ್ತು ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಾತ್ರ ಹಾಗೂ ಗ್ರಾಮದ ಆರೊಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಕೇತಾ ಹಟ್ಟಿಹೊಳಿ ಚಾಲನೆ ನೀಡಿದರು.
ಪಿಡಿಒ ರಾಯಪ್ಪ ಬಾಗಿಲದ, ಸಂಗಪ್ಪ ಬೆಳಗಾವಿ, ರಾಜು ಕಲಾಲ, ವಿಜಯ ಅಂಗಡಿ, ಪ್ರಕಾಶ ಹಟ್ಟಿಹೊಳಿ, ಶಿವು ಮಿಡಚಿ ಮಾತನಾಡಿದರು.
ಗ್ರಾ.ಪಂ. ಉಪಾಧ್ಯಕ್ಷೆ ಮಹಾದೇವಿ ಮಬನೂರ, ವೀರಭದ್ರ ಗುಲಗಂಜಿ, ನಿಂಗಮ್ಮ ಡಂಗೂರಿ, ದೊಡ್ಡವ್ವ ಧರ್ಮಶಾಲಿ, ಸಂತೋಷ ಶೆಟ್ಟರ್, ನೀಲಕಂಠ ಕರ್ಜಗಿ, ವಿಜಯ ಕಾಳಣ್ಣವರ, ಸಪ್ನಾ ಹಡಪದ, ರೇಣುಕಾ ಇಳಿಗೇರ, ಸುನಿತಾ ತಳವಾರ ಎಸ್.ಎಂ. ಸರಾವರಿ, ಬಿ.ಬಿ. ವೀಬೂತಿ, ನೀಲಮ್ಮ ಪೂಜೇರಿ, ಶಿವಲೀಲಾ ಗೂಗಾರ, ಸುನಂದಾ ಹಟ್ಟಿಹೊಳಿ ಮತ್ತಿತರರು ಇದ್ದರು. ಯು.ಬಿ. ಅಣ್ಣಿಗೇರಿ ಸ್ವಾಗತಿಸಿದರು. ಶ್ರೀಶೈಲ ಮಲಕಾಜನವರ ನಿರೂಪಿಸಿದರು. ಎಂ.ಎಚ್. ಹುಣಶೀಕಟ್ಟಿ ವಂದಿಸಿದರು.
Kshetra Samachara
11/11/2024 01:39 pm