ಬೆಳಗಾವಿ: ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಮುಗಿದು ಎರಡು ವರ್ಷ ಕಳೆದಿದೆ. ಆದರೆ ಆಸ್ಪತ್ರೆ ಯಾವಾಗ ಆರಂಭ ಆಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಸದ್ಯ ಇದಕ್ಕೆ ಮುಹೂರ್ತ ಕೂಡಿ ಬಂದಂತೆ ಕಾಣುತ್ತಿದೆ. ಶೀಘ್ರವೇ ಆಸ್ಪತ್ರೆ ಓಪನ್ ಆಗಲಿದೆ.
ಬೆಳಗಾವಿಯ ಬಿಮ್ಸ್ ಆವರಣದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆ ಆರಂಭವಾದರೆ ಪ್ರತಿ ನಿತ್ಯ ಸಾವಿರಾರು ರೋಗಿಗಳಿಗೆ ಉಚಿತ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯಲಿದೆ. ಬೆಳಗಾವಿಯ ಬಿಮ್ಸ್ ಆವರಣದಲ್ಲಿ ನಿರ್ಮಾಣ ಆಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಿವಿಲ್ ಕೆಲಸಗಳು ಎಲ್ಲಾ ಮುಗಿದಿದೆ. ಆಸ್ಪತ್ರೆಗೆ ಬೇಕಿರುವ ಬಹುತೇಕ ಸಲಕರಣೆ ಬಂದಿದೆ. 30.8 ಕೋಟಿ ರೂಪಾಯಿ ವೆಚ್ಚದ ಸಲಕರಣೆಗಳು ಬಂದಿವೆ. 2 ಕೋಟಿ ವೆಚ್ಚದ ಸಲಕರಣೆಗಳನ್ನು ಬಿಮ್ಸ್ ವತಿಯಿಂದ ಖರೀದಿಸಲಾಗುತ್ತಿದೆ. ಆಸ್ಪತ್ರೆಗೆ ಬೇಕಿರುವ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ತಿಳಿಸಲಾಗಿದೆ. ಈಗಾಗಲೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್, ಸೆಂಟ್ರಲ್ ಲ್ಯಾಬರಟ್ರಿ, ಸಿಟಿ ಸ್ಕಾನ್, ರೇಡಿಯೋಲಾಜಿ ವಿಭಾಗ, ಒಂದು ತಿಂಗಳ ಅವಧಿಯಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಜನತೆಯು ಆಸ್ಪತ್ರೆ ಓಪನ್ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಅಧಿವೇಶನ ಸಂದರ್ಭದಲ್ಲಿ ಆಸ್ಪತ್ರೆ ಆರಂಭವಾಗುವ ಸಾಧ್ಯತೆ ಇದೆ. ಈ ಆಸ್ಪತ್ರೆಯಲ್ಲಿ ಕಾಡಿಯೋಲಾಜಿ ವಿಭಾಗ, ಗ್ಯಾಸ್ಟ್ರೋ ಎಂಟ್ರೋಲಾಜಿ ವಿಭಾಗ, ನೇಫ್ರೋಲಾಜಿ ವಿಭಾಗ, ಯುರೋಲಾಜಿ ವಿಭಾಗ, ಪಿಡಿಯಾಟ್ರಿಕ್ ಸರ್ಜರಿ ವಿಭಾಗ, ಪ್ಲಾಸ್ಟಿಕ್ ಸರ್ಜರಿ ವಿಭಾಗ, ಕಾಡಿಯೋ ಥರಸ್ಟಿಕ್ ಸರ್ಜರಿ ವಿಭಾಗ ಹೊರತು ಪಡಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗಳು ಸಿಗಲಿದೆ.
ಒಟ್ಟಿನಲ್ಲಿ ಅಂದುಕೊಂಡಂತೆ ಆದರೆ ಖಾಸಗಿ ಆಸ್ಪತ್ರೆಗಳಲ್ಲೂ ಇರುವ ಸೌಲಭ್ಯ ಈ ಆಸ್ಪತ್ರೆಯಲ್ಲಿ ಸಿಗಲಿದೆ. ಹಾಗಾಗಿ ಈ ಭಾಗದ ಜನರಿಗೆ ಉಚಿತವಾಗಿ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಿಗಲಿದೆ.
PublicNext
10/11/2024 01:44 pm