ಬೆಂಗಳೂರು : ಶಾಸಕರಿಗೆ ಬಿಜೆಪಿ 50 ಕೋಟಿ ಆಫರ್ ಮಾಡ್ತಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಶಾಸಕರುಗಳಿಗೆ ಬಿಜೆಪಿ 5೦ ಕೋಟಿ ಆಫರ್ ಇರೋದು ಸತ್ಯನೇ ಇದೆ ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಂಪುಟ ಸಭೆಗೂ ಮುನ್ನ ಮಾತನಾಡಿದ ಸಚಿವ ಸಂತೋಷ ಲಾಡ್, ಸಿಎಂ ಹೇಳಿಕೆಯಲ್ಲಿ ಸತ್ಯನೇ ಇದೆ, ಬಿಜೆಪಿಯವರು ನೇರವಾಗಿ ಹಾಗೂ ಪರೋಕ್ಷವಾಗಿ 18 ತಿಂಗಳಿನಿಂದ ಈ ಕೆಲಸ ಮಾಡ್ತಾರೆ ಇದ್ದಾರೆ. ಶಾಸಕರಿಗೆ ಬಿಜೆಪಿ ೫೦ ಕೋಟಿ ಆಫರ್ ಮಾಡ್ತಿರೋದು ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಖಚಿತ ಮಾಹಿತಿ ಇದೆ ಹೀಗಾಗಿ ಸಿಎಂ ಹೇಳಿದ್ದಾರೆ.
50 ಕೋಟಿ ಎಲ್ಲಾವೂ ಕೊಡೋದಕ್ಕೆ ಸಾಧ್ಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಮೋದಿಯವರಿಗೆ ಎನಿಥಿಂಗ್ ಇಸ್ ಪಾಸಿಬಲ್ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರಿಗೆ ಸರ್ಕಾರ ಅಸ್ಥಿರ ಗೊಳಿಸೋದೆ ಅವರ ಕೆಲಸ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
PublicNext
14/11/2024 12:21 pm