ಬೆಂಗಳೂರು : ಕರ್ನಾಟಕದ ಹೆಮ್ಮೆಯ ಕೆಎಂಎಫ್ ಸಂಸ್ಥೆಗೆ ದೀಪಾವಳಿ ಮತ್ತು ದಸರಾ ಹಬ್ಬಗಳು ಬಂಪರ್ ಆದಾಯ ತಂದುಕೊಟ್ಟಿದೆ. ಈ ಹಿಂದಿಗಿಂತ ಎರಡು ಪಟ್ಟು ಸಿಹಿ ಉತ್ಪನ್ನಗಳು ಮಾರಾಟವಾಗಿದ್ದು, ಗಳಿಕೆಯಲ್ಲೂ ಭರ್ಜರಿ ಲಾಭ ಬಂದಿದೆ...
ಕಳೆದ ಅಕ್ಟೋಬರ್ ತಿಂಗಳ ಒಂದಲ್ಲೇ 722 ಟನ್ ಸಿಹಿ ಉತ್ಪನ್ನಗಳು ಮಾರಾಟವಾಗಿದೆ. ಈ ಮೂಲಕ ಕೆಎಂಎಫ್ ನಲ್ಲಿ ಭರ್ಜರಿ 175 ಕೋಟಿ ವಹಿವಾಟು ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗ್ನೋಡಿದ್ರೆ ಕಳೆದ ವರ್ಷ ದೀಪಾವಳಿ, ದಸರಾ ಹಬ್ಬದ ವೇಳೆ 400 ಟನ್ ಸಿಹಿ ಉತ್ಪನ್ನಗಳು ಮಾರಾಟವಾಗಿತ್ತು. ಆದರೆ ಈ ಸಲ ಸಿಹಿ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದ್ದು, ಕೆಎಂಎಫ್ ಫುಲ್ ಖುಷಿಯಲ್ಲಿದೆ...
Kshetra Samachara
14/11/2024 07:45 am