ಮೈಸೂರು : ಮುಡಾದ ಸುಳ್ಳು ಕೇಸ್‌ಗಳನ್ನ ಇಡಿ ತನಿಖೆ ಮಾಡುತ್ತಿದೆ ಮಾಡಲಿ ಬಿಡಿ, ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಇಡಿ ಅವರು ಕೆಲಸ ಅವರು ಮಾಡುತ್ತಿದ್ದಾರೆ. ನಾನು ಇದರ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ.
ಇಡಿಯವರು ಯಾರನ್ನಾದರು ಕರೆಸಲಿ, ವಿಚಾರಣೆ ಮಾಡಲಿ ಅದು ಅವರ ತನಿಖಾ ಕ್ರಮ, ಇಡಿಯಿಂದ ನಡೆಯುತ್ತಿರುವ ತನಿಖೆ ಸುಳ್ಳು ಕೇಸಿನ ಮೇಲೆ ನಡೆಯುತ್ತಿರುವ ತನಿಖೆಗಳು. ಇದರ ಬಗ್ಗೆ ನಾನು ಯಾಕೆ ಪ್ರತಿಕ್ರಿಯೆ ಕೊಡಲಿ ಎಂದ್ರು. ಜೊತೆಯಲ್ಲಿ ಪತ್ನಿ ನೋಟಿಸ್ ಬಂದಿದ್ಯಾ ಎಂಬ ಪ್ರಶ್ನೆಗೆ ಗರಂ ಆದ ಸಿಎಂ, ನಿಮ್ಮಗೆ ಏನಾದರೂ ಹೇಳಿದ್ದಾರಾ? ನಿಮಗೆ ಕೊಡಲಿ ಎಂಬ ಭಯಕೆನಾ ಎಂದು ಸಿಎಂ ಗರಂ ಆದ್ರು.
PublicNext
13/11/2024 07:53 pm