ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಎಲ್.ಐ.ಸಿ/ಎಂ.ಎಲ್.ಐ.ಸಿ, ಎಂ.ಎ/ಎಂ.ಕಾಂ, ಎಂ.ಎಸ್ಸಿ/ಎಂ.ಬಿ.ಎ/ಸ್ನಾತಕ, ಸ್ನಾತಕೋತ್ತರ ಪದವಿ/ಡಿಪ್ಲೊಮೋ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದೆ. ಪ್ರವೇಶಾತಿಯ ಪ್ರಯುಕ್ತ ಚಿಕ್ಕಮಗಳೂರು ಪ್ರಾದೇಶಿಕ ಕೇಂದ್ರ ರಜಾದಿನಗಳಲ್ಲಿಯು ಸಹ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಗುರುದತ್ ಕೆ.ಪಿ. (ದೂ.ಸಂ. 8088719636, 9449396155, 9481478448) ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
13/11/2024 03:18 pm