ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳಿಗೆ ಗಣಿತ ಪಾಠ ಹೇಳಿಕೊಟ್ಟ ಕನ್ನಡ ಪೂಜಾರಿ ಕಣ್ಣನ್ ಮಾಮ

ಚಿಕ್ಕಮಗಳೂರು: ಇಂದಿನ ಯುವಸಮೂಹ ಜಾಗೃತೆ ವಹಿಸುವ ಮೂಲಕ ಕನ್ನಡದ ಬೆಳಕನ್ನು ಬತ್ತದಂತೆ ನಿಗಾವಹಿಸಬೇಕು ಎಂದು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಮಾಮ ಹೇಳಿದರು.

ನರ್ಚರ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಲೆಯ ಬೋಧಕ ವರ್ಗವು ಅನೇಕ ವಿಷಯಗಳ ಅಭ್ಯಾಸಿಸುವ ವೇಳೆಯಲ್ಲಿ ಭಾಷಾಭಿಮಾನದ ಸೊಗಡನ್ನು ಹಂತ ಹಂತವಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು. ಅಲ್ಲದೇ ನಾಡಿಗಾಗಿ ದುಡಿದ ಕವಿಸಂತರ ಜೀವನಚರಿತ್ರೆಯನ್ನು ಪರಿಚಯಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡವನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದು ಹೇಳಿದ್ರು. ನಾಡಿನ ಖ್ಯಾತ ಕವಿಗಳು, ಶ್ರೇಷ್ಟ ಸಂತರು, ದಾರ್ಶನಿಕರು ವಿಭಿನ್ನ ಶೈಲಿಯಿಂದಲೇ ಕೃತಿಗಳ ರಚನೆ, ವಚನಗಳ ಮುಖಾಂತರ ಭಾಷಾಭಿಮಾನ ಮೆರೆದಿರುವ ಕಾರಣ ಕನ್ನಡವು ಎಲ್ಲೆಡೆ ವಿಶಾಲವಾಗಿ ಪಸರಿಸಿದೆ ಎಂದರು.

Edited By : PublicNext Desk
Kshetra Samachara

Kshetra Samachara

08/11/2024 06:30 pm

Cinque Terre

380

Cinque Terre

0

ಸಂಬಂಧಿತ ಸುದ್ದಿ