ಬೆಂಗಳೂರು: ಪಿಜಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿರುವ ಹಾಗೂ ವೆರಿಫಿಕೇಷನ್ ಚೀಟಿಯಲ್ಲಿ ತಮ್ಮ ಕ್ಲೇಮ್ ಗಳು ತಪ್ಪಾಗಿದ್ದಲ್ಲಿ ಅಂತಹವರು ನವೆಂಬರ್ 15ರವರೆಗೆ ಇಲ್ಲಿನ ಕೆಇಎ ಕಚೇರಿಗೆ ಬಂದು ಸರಿಮಾಡಿಸಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಎನ್ ಆರ್ ಐ ವಾರ್ಡ್, ಎಚ್.ಕೆ ಇತ್ಯಾದಿ ಕ್ಲೇಮ್ ಗಳು ವೆರಿಫಿಕೇಷನ್ ಸ್ಲಿಪ್ ನಲ್ಲಿ ತಪ್ಪಾಗಿದ್ದರೆ ಅಂತಹವರು ಸರಿ ಮಾಡಿಸಿಕೊಳ್ಳಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಪ್ರತಿ ಮತ್ತು ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳೊಂದಿಗೆ ಕೆಇಎಗೆ ಬರಬೇಕು. ಅರ್ಜಿ ಹಾಕುವಾಗಲೇ ತಪ್ಪು ಆಗಿದ್ದು, ಅದನ್ನು ತಿದ್ದುಪಡಿ ಮಾಡಿಕೊಳ್ಳುವವರು ಕೂಡ ಈ ದಿನಗಳಂದು ಸರಿ ಮಾಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.
PublicNext
13/11/2024 02:24 pm