ಬೆಂಗಳೂರು: ಜಯದೇವ ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಮೊಬೈಲ್ ಇರಿಸಿ ಖಾಸಗಿ ವಿಡಿಯೋ ಸೆರೆ ಪ್ರಕರಣ ಸಂಬಂಧ ಸದ್ಯ ಸಿಬ್ಬಂದಿ ಸುರಕ್ಷತೆಗೆ ಆಸ್ಪತ್ರೆ ಮುನ್ನುಡಿ ಬರೆದಿದೆ. ಘಟನೆ ಬಳಿಕ ಆಸ್ಪತ್ರೆ ಸಿಬ್ಬಂದಿ ಸುರಕ್ಷತೆಗಾಗಿ ಸುಹೃದ್ ನೂತನ ಆ್ಯಪ್ ಅಭಿವೃದ್ಧಿ ಮಾಡಿದ್ದು ಸುಹೃದ್ ಅಂದ್ರೆ ಸಂಸ್ಕೃತದಲ್ಲಿ ಒಳ್ಳೆಯ ಹೃದಯ ಅಂತ ಅರ್ಥ.
ಈ ಆ್ಯಪ್ ಅಲ್ಲಿ ವ್ಯಕ್ತಿ ಮೂರು ಸಲ ಮೊಬೈಲ್ ಶೇಖ್ ಮಾಡಿದ್ರೆ ಸಾಕು.. ಆ್ಯಪ್ ಇನ್ಸ್ಟಾಲ್ ಮಾಡಿದವರಿಗೆ ಅಲರಾಮ್ ಹೋಗುತ್ತೆ. ಸೆಕ್ಯೂರಿಟಿ ಇಂದ ಹಿಡಿದು ಡೈರೆಕ್ಟರ್ ವರೆಗೂ ಮೆಸೇಜ್ ಹೋಗುತ್ತೆ. ಮೊಬೈಲ್ ಆನ್ ಮಾಡೋ ಅವಶ್ಯಕತೆ ಇಲ್ಲ ಜಸ್ಟ್ ಆ್ಯಪ್ ಇನ್ಸ್ಟಾಲ್ ಮಾಡಿ 3 ಬಾರಿ ಶೇಖ್ ಮಾಡಿದ್ರೆ ಸಾಕು.
ಅಷ್ಟೇ ಅಲ್ಲ ಯಾರಿಗೆ ಸಮಸ್ಯೆ ಆಗಿದ್ಯೋ ಅವರ ಲೊಕೇಶನ್ ಸಮೇತ ಟ್ರ್ಯಾಕ್ ಆಗುತ್ತೆ. ತಕ್ಷಣ ಸಂಬಂಧಪಟ್ಟವರು ಸಹಾಯ ಮಾಡಲು ಅನುಕೂಲ ಆಗುತ್ತೆ. ಜಯದೇವ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಫೋನ್ನಲ್ಲಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಬೇಕು . ತುರ್ತು ಸಂದರ್ಭದಲ್ಲಿ ಫೋನ್ ಶೇಕ್ ಮಾಡಿದ್ರೆ ಕಮಾಂಡ್ ಸೆಂಟರ್ಗೆ ಸಂದೇಶ ರವಾನೆ ಆಗುತ್ತೆ. ಆಸ್ಪತ್ರೆ ವೈದ್ಯರಿಂದ ಹಿಡಿದು ,ವಾರ್ಡ್ ಬಾಯ್ ,ಸ್ವೀಪರ್ ಗಳ ವರೆಗೆ ಯೋಜನೆ ಅನುಷ್ಠಾನ ಮಾಡಲು ತಯಾರಿ ಆಗ್ತಿದೆ.
PublicNext
13/11/2024 01:38 pm