ಮಂಗಳೂರು: ಕೊಟ್ಟಾರಿ ಯುವ ವೇದಿಕೆಯ ಆಶ್ರಯದಲ್ಲಿ ಕೊಟ್ಟಾರಿ ಪ್ರೀಮಿಯರ್ ಲೀಗ್ 2024 ಸೀಸನ್ 5ರ ಕ್ರಿಕೆಟ್ ಪಂದ್ಯಾಟ ಎರಡು ದಿನಗಳ ಕಾಲ ನಗರದ ಉರ್ವ ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ನಡೆದ ಪ್ರತೀ ತಂಡಕ್ಕೆ ಆರು ಪಂದ್ಯಾಟವಿತ್ತು. ಕ್ವಾಟರ್ ಫೈನಲ್, ಸೆಮಿಫೈನಲ್, ಫೈನಲ್ ಹಂತದಲ್ಲಿ ಪಂದ್ಯಾಟ ನಡೆಯಿತು. ಸೆಮಿಫೈನಲ್ ನಲ್ಲಿ ನಾಲ್ಕು ತಂಡಗಳು ಪ್ರವೇಶ ಪಡೆದು, ಪಂದ್ಯಾವಳಿಯ ಫೈನಲ್‌ನಲ್ಲಿ ಕೊಟ್ಟಾರಿ ತತ್ವಮಸಿ ಹಾಗೂ ಕೊಟ್ಟಾರಿ ಮೈಟಿ ಬುಲ್ಸ್ ತಂಡಗಳು ಮುಖಾಮುಖಿಯಾಯಿತು.
ಟಾಸ್ ಜಯಿಸಿದ ಮೈಟಿ ಬುಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೈಟಿ ಬುಲ್ಸ್ ವಿರುದ್ಧ ತತ್ವಮಸಿ ತಂಡ ನಾಲ್ಕು ಓವರ್ ಗಳಲ್ಲಿ 27 ರನ್ ಗಳ ವಿಜಯದ ಗುರಿ ನೀಡಿತ್ತು. ಸರಳ ಗುರಿ ಬೆನ್ನಟ್ಟಿದ ಮೈಟಿ ಬುಲ್ಸ್ ತಂಡ ಕೊನೆಯ ಓವರ್ ನಲ್ಲಿ ಒಂದು ಬಾಲ್ ಇರುವಂತೆಯೇ ರೋಚಕ ಗೆಲುವು ಸಾಧಿಸಿತ್ತು. ಕೊನೆಯ ಓವರ್ ನಲ್ಲಿ ಬೌಂಡರಿ ಬಾರಿಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕಿಶೋರ್ ಕೊಟ್ಟಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯಾಟದುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸುಕೇಶ್ ಕೊಟ್ಟಾರಿಯವರಿಗೆ ಪಂದ್ಯಕೂಟದ ಶ್ರೇಷ್ಠ ಬ್ಯಾಟ್ಸ್‌ಬ್ಯಾನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿಶಾಂತ್ ಬೆಸ್ಟ್ ಬೌಲರ್, ನಿಕಿತ್ ಕಣ್ಣೂರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಹೊನಲು ಬೆಳಕಿನಲ್ಲಿ ರಣರೋಚಕವಾಗಿ ನಡೆದ ಫೈನಲ್ ಪಂದ್ಯಾಟದಲ್ಲಿ ಮೈಟಿ ಬುಲ್ಸ್ ತಂಡ, ಕೊಟ್ಟಾರಿ ಪ್ರೀಮಿಯರ್ ಲೀಗ್ 2024ರ ಚಾಂಪಿಯನ್ ಆಗಿ ಹೊರಹೊಮ್ಮಿತು.
PublicNext
11/11/2024 05:30 pm