ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ದೈಹಿಕ, ಮಾನಸಿಕ, ಆರೋಗ್ಯವನ್ನು ಸುಧಾರಿಸಲು ಕ್ರೀಡೆ ಸಹಕಾರಿ

ಮುಲ್ಕಿ:ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದ್ಯೆಹಿಕ, ಮಾನಸಿಕ, ಆರೋಗ್ಯವನ್ನು ಸುಧಾರಿಸಲು, ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನವನ್ನು ಬೆಳೆಸಲು ಸಾಧ್ಯ.ಇಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಲು, ಮನಸ್ಸಿನ ಒತ್ತಡವನ್ನು ನಿಯಂತ್ರಿಸಲು, ನಾಯಕತ್ವ ಗುಣವನ್ನು ಬೆಳೆಸಲು ಕ್ರೀಡೆಯು ಸಹಕಾರಿ ಎಂದು ರಾಜ್ಯ ಮಟ್ಟದ ಹರ್ಡಲ್ ಓಟಗಾರ ದೀಪು ಜೆ.ಶೆಟ್ಟಿ ಹೇಳಿದರು. ಪೊಂಪೈ ಪದವಿಪೂರ್ವ ಕಾಲೇಜಿನ ಮ್ಯೆದಾನದಲ್ಲಿ ನಡೆದ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಪಥ ಸಂಚಲನ ಸ್ವೀಕರಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ| ಓಸ್ವಾಲ್ಡ್ ಮೊಂತೇರೋ ವಹಿಸಿದ್ದರು

ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ರೋಹನ್ ಡಿ'ಕೋಸ್ಟ, ಶಿಕ್ಷಕ - ರಕ್ಷಕ ಸಂಘದ ಉಪಾಧ್ಯಕ್ಷ ಲಿಯೋ ಲಾಯ್ಡ್ ಡಿ'ಸೋಜ , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಿಲ್ಡಾ ಡಿ'ಸೋಜ ಉಪಸ್ತಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ಡೆಸ್ಮಂಡ್ ಡಿ'ಮೆಲ್ಲೋ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕ ಲಾರೆನ್ಸ್ ಸೀಕ್ವೇರಾ ರವರು ಕಾರ್ಯಕ್ರಮ ನಿರೂಪಿಸಿದರು. ದೆ`ಹಿಕ ಶಿಕ್ಷಣ ಉಪನ್ಯಾಸಕ ಆಲ್ವಿನ್ ಮಿರಾಂದ ವಂದಿಸಿದರು.

Edited By : PublicNext Desk
Kshetra Samachara

Kshetra Samachara

11/11/2024 10:43 pm

Cinque Terre

2.61 K

Cinque Terre

0

ಸಂಬಂಧಿತ ಸುದ್ದಿ