ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಕ್ಸಿಟ್ ಪೋಲ್ ಫಲಿತಾಂಶ ಗಂಭೀರವಾಗಿ ಪರಿಗಣಿಸೋಲ್ಲ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು - ದಿನೇಶ್ ಗುಂಡೂರಾವ್

ಮಂಗಳೂರು : ನಾವು ಎಕ್ಸಿಟ್ ಪೋಲ್ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮಂಗಳೂರಿನಲ್ಲಿ ಉಪ ಚುನಾವಣೆಯ ಫಲಿತಾಂಶ ವಿಚಾರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಪಡಿತರ ಚೀಟಿ ರದ್ದು ವಿಚಾರದಲ್ಲಿ ಮಾತನಾಡಿದ ಅವರು, ಕೆಲವೆಡೆ ಬಡತನ ರೇಖೆಗಿಂತ ಕಡಿಮೆಯಿರುವ 80-90 ಪರ್ಸೆಂಟ್ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಆರೋಪ‌ ಮಾಡಲಾಗುತ್ತಿದೆ. ಆದರೆ ವೈಜ್ಞಾನಿಕವಾಗಿ‌ ನೋಡಿದಾಗ ಅದು ಸಾಧ್ಯವಿಲ್ಲ. ಅನರ್ಹ ಕಾರ್ಡು‌ಗಳನ್ನು ರದ್ದು ಪಡಿಸಲಾಗಿದೆ‌. ಆದಾಯ ತೆರಿಗೆ ಕಟ್ಟುವವರು, ಸರ್ಕಾರಿ ನೌಕರರು ಸೇರಿದಂತೆ ಇತರ ಮಾನದಂಡ ಆದರಿಸಿ ಕಾರ್ಡ್ ರದ್ದು ಪಡಿಸಲಾಗಿದೆಯೆಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಕೆಲವು ತಪ್ಪು ಆಗಿದೆ ಅದನ್ನು ಸರಿಸಡಿಸುತ್ತೇವೆ. ತಪ್ಪಾಗಿರೋದನ್ನು ಸರಿಪಡಿಸಲೇ ಬಾರದು ಅನ್ನೋದು ಯಾವ ಲಾಜಿಕ್ ಎಂದರು.

ಕೇಂದ್ರ ಸರ್ಕಾರ 5.80 ಕೋಟಿ ಪಡಿತರ ಚೀಟಿ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ವಿಚಾರ ಯಾಕೆ ಬಿಜೆಪಿ ಮಾತಾಡುತ್ತಿಲ್ಲ ?.‌ಸರ್ಕಾರದ ಹಣ ಅರ್ಹ ಫಲಾನುಭವಿಗಳಿಗೆ ಮುಟ್ಟಬೇಕು. ಗೃಹಲಕ್ಷ್ಮಿ ಯೋಜನೆಗೂ ಪಡಿತರಕ್ಕೂ ಯಾವುದೇ ಸಂಬಂಧವಿಲ್ಲ. ಕೆಲವು ಪಡಿತರ ರದ್ದು ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಯಾಗಿದೆ ಅದನ್ನು ಸರ್ಕಾರ ಸರಿ ಮಾಡುತ್ತದೆ. ವ್ಯವಸ್ಥೆ ಸುಧಾರಣೆ ಮಾಡುವಾಗ ಸ್ಪಲ್ಪ ಸಮಸ್ಯೆ ಬರುತ್ತದೆ. ಅದನ್ನು ಸರಿ ಪಡಿಸುತ್ತೇವೆ ಎಂದರು.

ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್ ವಿಚಾರದಲ್ಲಿ ಮಾತನಾಡಿ, ನಮಗೆ ಯಾರನ್ನೂ ಕೊಲ್ಲುವ ಉದ್ದೇಶವಿಲ್ಲ. ಆದರೆ ತೀವ್ರಗಾಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದರ ಬಗ್ಗೆ ತಿಳಿದು ಮಾತಾಡುತ್ತೇನೆ, ಇದು ಗಂಭೀರ ವಿಚಾರ.‌ ನಕ್ಸಲನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Edited By : Shivu K
PublicNext

PublicNext

21/11/2024 12:48 pm

Cinque Terre

25.79 K

Cinque Terre

1

ಸಂಬಂಧಿತ ಸುದ್ದಿ