ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಹಿಂದೂಗಳ ರಕ್ತದ ಕಣಕಣದಲ್ಲೂ ಸನಾತನ ಸಂಸ್ಕೃತಿ ಇರುತ್ತೆ

ಬ್ರಹ್ಮಾವರ: ವಿಶ್ವಹಿಂದೂ ಪರಿಷತ್ ಭಜರಂಗ ದಳ ಬ್ರಹ್ಮಾವರ ಪ್ರಖಂಡ ಇವರ ವತಿಯಿಂದ ಅಯೋಧ್ಯ ಬಲಿದಾನ ದಿವಸ್ ಅಂಗವಾಗಿ ಬಜರಂಗ ದಳದಿಂದ ಬ್ರಹ್ಮಾವರ ಭಂಟರ ಭವನದಲ್ಲಿ ಪ್ರಖಂಡದ ಸಂಯೋಜಕ ಭರತ್ ದಾಸ್ ಬಿರ್ತಿನೇತೃತ್ವದಲ್ಲಿ ರಕ್ತದಾನ ಶಿಬಿರ ಜರುಗಿತು.

ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಮಹೇಶ್ ಐತಾಳ್ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಧರ್ಮ ಪ್ರಸಾರ ಪ್ರಮುಖ್ ಸುನೀಲ್ ಕೆ. ಆರ್, ಮಾತನಾಡಿ ಭಾರತ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನ ಹೋರಾಟದ ಮೂಲಕ ನಾವು ಇಂದು ನೆಮ್ಮದಿಯ ಬದುಕು ಕಾಣಲುಸಾದ್ಯವಾಗಿದೆ ರಕ್ತ ದಾನ ಶ್ರೇಷ್ಠದಾನವಾಗಿದೆ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿಯ ವೈದ್ಯಾಧಿಕಾರಿ ಡಾ. ಸುಮಂಕಿತ,ವಿಶ್ವಹಿಂದೂ ಪರಿಷತ್ ಪ್ರಮುಖರಾದ ದಿನೇಶ್ ಮೆಂಡನ್, ಚೇತನ್ ಪೇರಲ್ಕೆ, ಜಯ ಪೂಜಾರಿ ಇನ್ನಿತರು ಉಪಸ್ಥಿತರಿದ್ದರು. ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

Edited By : Nagesh Gaonkar
Kshetra Samachara

Kshetra Samachara

10/11/2024 05:17 pm

Cinque Terre

5.15 K

Cinque Terre

0

ಸಂಬಂಧಿತ ಸುದ್ದಿ