ಸುರತ್ಕಲ್: ಅನೇಕ ಜನರು ಅವಘಡ, ಗ್ಯಾಂಗ್ರಿನ್ ಮತ್ತಿತರ ವಿಚಾರಗಳಿಗೆ ಕಾಲು ಕಳೆದುಕೊಂಡ ಅನಿವಾರ್ಯ ಸ್ಥಿತಿಗಳಲ್ಲಿ ಕೃತಕ ಅವಯವದ ಜೋಡಣೆಯಿಂದ ತಕ್ಕಮಟ್ಟಿಗೆ ಸಹಜ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಂಸಿಎಫ್ ಎಸ್‌ಆರ್ ಸಹಕಾರದಲ್ಲಿ ಕೃತಕ ಅಂಗಾಂಗ ಜೋಡಣೆ ಸಲಕರಣೆ ನೀಡುತ್ತಾ ಬರುತ್ತಿರುವುದು ಅಭಿನಂದನೀಯ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಶನಿವಾರ ಪಣಂಬೂರು ಎಂ ಎಂಸಿಎಫ್ ಸಂಸ್ಥೆಯಲ್ಲಿ ನಡೆದ ಕೃತಕ ಅಂಗಾಂಗ ಜೋಡಣೆ ಸಲಕರಣೆ ವಿತರಿಸಿ ಮಾತನಾಡಿದರು.
ಸಾಮಾಜಿಕ ಜವಾಬ್ದಾರಿ ಹಣಕಾಸಿನಡಿ ಕ್ಲಾಸ್ ರೂಂ ನವೀಕರಣ, ಅಂಗನವಾಡಿ ಕೇಂದ್ರದ ನವೀಕರಣ, ಟ್ರೋಲಿ, ವಿತರಣೆ ಸಹಿತ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಶಾಸಕರು ಹೇಳಿದರು.
ಎಂಸಿಎಫ್‌ನ ಸಿಇಒ ನಿತಿನ್ ಎಂ. ಕಾಂಟಕ್ ಮಾತನಾಡಿದರು. ಮೇಯರ್ ಮನೋಚ್ ಕುಮಾರ್, ಮನಪಾ ಸದಸ್ಯರಾದ ಅನಿಲ್ ಕುಮಾರ್ ಅವರು ಸಂಸ್ಥೆಯ ಮಾನವೀಯ ಕರ್ತವ್ಯವನ್ನು ಶ್ಲಾಘಿಸಿದರು ಕಾರ್ಯಕ್ರಮದಲ್ಲಿ ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥ ಗಿರೀಶ್ ಎಸ್. ಅವರು ಸಿಎಸ್‌ಆರ್ ಯೋಜನೆಯ ಕುರಿತಂತೆ ಮಾತನಾಡಿದರು.
ಮನಪಾ ಸದಸ್ಯೆ ಸುಮಂಗಳ ರಾವ್ ಉಪಸ್ಥಿತರಿದ್ದರು. ಡಾ ಯೋಗೀಶ್ ನಿರೂಪಿಸಿ ,ಚೇತನ್ ಮೆಂಡೋನ್ಸ ವಂದಿಸಿದರು. ಎಂಸಿಎಫ್ ಅಧಿಕಾರಿಗಳು,ರೋಟರಿ ಇನ್ನರ್ ವೀಲ್ ಪದಾಧಿಕಾರಿಗಳು ಭಾಗವಹಿಸಿದ್ದರು.
11 ಮಂದಿಗೆ ಕೃತಕ ಕಾಲು ಜೋಡಣೆ,3 ಮಂದಿಗೆ ಶ್ರವಣ ಸಾಧನ ವಿತರಣೆ,ಸೆಂಟ್ರಲ್ ,ಜಂಕ್ಷನ್ ರೈಲು ನಿಲ್ದಾಣಕ್ಕೆ ವೀಲ್ ಚೇರ್, ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರೋಲಿ,ಯಂತ್ರ ಕೊಡುಗೆ,ಸೇವಾ ಭಾರತಿಗೆ ಸಂಸ್ಥೆಗೆ ಫಿಸಿಯೋಥೆರೆಪಿ ಸಾಧನ ವಿತರಣೆ ಮಾಡಲಾಯಿತು.
PublicNext
10/11/2024 12:49 pm