ಚಿಕ್ಕಮಗಳೂರು: ತಾಲೂಕಿನ ತುಡುಕೂರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಸಲಗ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಗುಂಪಿನಲ್ಲಿದ್ದ ಉಳಿದ 23 ಆನೆಗಳು ವಿಚಲಿತಗೊಂಡಿವೆ. ಅಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಮೃತಪಟ್ಟ ಆನೆಯನ್ನು ನೋಡಲು ತೆರಳುತ್ತಿದ್ದು ಇದರಿಂದ ಅರಣ್ಯ ಇಲಾಖೆ ಹಾಗೂ ಇ ಟಿ ಎಫ್ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿದೆ. ಉಳಿದ ಆನೆಗಳು ನೋಡಲು ಹೋಗುತ್ತಿರುವ ಜನಗಳ ಮೇಲೆ ದಾಳಿ ಮಾಡಬಹುದೆಂದು. ನಿನ್ನೆ ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆ ನಡೆಸಬೇಕಾಗಿರುವುದರಿಂದ ಹಾಗೂ ಇಂದಿನ ದತ್ತಮಾಲಾ ಅಭಿಯಾನಕ್ಕೆ ಹೆಚ್ಚಿನ ಪೊಲೀಸ್ ನಿಯೋಜನೆಗೊಂಡಿರುವುದರಿಂದ ಭದ್ರತೆಯ ದೃಷ್ಟಿಯಿಂದಲೂ ಆನೆಗಳು ಬೀಡು ಬಿಟ್ಟಿರುವ ಸುತ್ತಲಿನ ಪ್ರದೇಶದಲ್ಲಿ ಇಂದು ರಾತ್ರಿ 9ಗಂಟೆಯ ವರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ರವರು ಬಿಎನ್ಎಸ್ ಕಾಯ್ದೆ 163 ರ ಅಡಿಯಲ್ಲಿ
ನಿಷೇಧಾಜ್ಞೆ ಹೊರಡಿಸಿದ್ದಾರೆ.
Kshetra Samachara
10/11/2024 07:11 am