ಬೆಂಗಳೂರು : ಕೋವಿಡ್ ಹಗರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸೋಮಣ್ಣ,ಯಡಿಯೂರಪ್ಪ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಉಳಿದುಕೊಳ್ಳಲು ಯಾವೆಲ್ಲ ಕಳ್ಳ ದಾರಿ ಇದೆ, ಆ ಕಳ್ಳ ದಾರಿಯನ್ನು ಹುಡುಕುತ್ತಿದ್ದಾರೆ ಇದು ನಿಮಗೆ ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.
ಈ ರೀತಿಯ ನಡುವಳಿಕೆ ಆಗಬಾರದು,ಹಳೆ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ,ಯಡಿಯೂರಪ್ಪ ಅವರನ್ನು ಸಿಗಸೋದು ಸರಿಯಲ್ಲ. ಆವತ್ತಿನ ಕೋವಿಡ್ ಸಂದರ್ಭದಲ್ಲಿ ನಾನು, ಅಶೋಕ್ ಎಲ್ಲರೂ ಕಷ್ಟ ಪಟ್ಟು ಕೆಲಸ ಮಾಡಿದ್ದೇವೆ. ಆವತ್ತಿನ ಸಂದರ್ಭ ಅಧಿಕಾರಿಗಳು ತೀರ್ಮಾನ ಮಾಡಿರುತ್ತಾರೆ. ಆ ತೀರ್ಮಾನಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುತ್ತದೆ. ಸಿದ್ದರಾಮಯ್ಯನವರೇ ಈ ವಿಚಾರದಲ್ಲಿ ಬಹಳ ಗೌರವವಾಗಿ ನಡೆದುಕೊಳ್ಳಿ, ಯಡಿಯೂರಪ್ಪ ಅವರಂತ ಹಿರಿಯ ರಾಜಕಾರಣಿಯನ್ನು ತಗಲಾಕಿದ್ರೆ ಏನೇನು ಆಗಲ್ಲ. ಇದು ವ್ಯವಸ್ಥಿತವಾದ ಷಡ್ಯಂತ್ರ ಪಿತೂರಿ ಎಂದು ಹೇಳುವ ಮೂಲಕ ಯಡಿಯೂರಪ್ಪ ಪರ ವಿ. ಸೋಮಣ್ಣ ಬ್ಯಾಟಿಂಗ್ ಮಾಡಿದ್ದಾರೆ.
PublicNext
09/11/2024 04:19 pm