ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಪಿಎಂ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಹಗರಣ ಸಾಬೀತು ಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ ಇಲ್ಲ ಅಂದ್ರೆ ನೀವು ಕೊಡ್ತೀರಾ ಎಂದು ಪ್ರಧಾನಿಗೆ ಸವಾಲು ಹಾಕಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಆತ್ಮ ಸಾಕ್ಷಿ ಇದ್ದವರಿಗೆ ಸಾಕ್ಷಿ ಬೇಕಿಲ್ಲ ಎಂದು ತಿರುಗೇಟು ನೀಡಿದರು.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ, ಸಿಎಂ ಸಿದ್ದರಾಮಯ್ಯ ಪಿಎಂಗೆ ಸವಾಲು ಹಾಕಿದ್ದಕ್ಕೆ ಕಿಡಿ ಕಾರಿದರು. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗುತ್ತಿಗೆದಾರರೇ ಪತ್ರ ಬರೆದು ಆರೋಪ ಮಾಡಿದ್ದಾರೆ. ನಿಮಗೆ ಅವರ ಹೇಳಿಕೆ ಸಾಕಾಗಲ್ವಾ? ನಿಮ್ಮ ಭ್ರಷ್ಟಾಚಾರಕ್ಕೆ ಸಾಕ್ಷಿ ಬೇರೆ ಬೇಕಾ?ಯಾವ ಸಾಕ್ಷಿ ಇಟ್ಟುಕೊಂಡು ಪೇ ಸಿಎಂ ಅಂತಾ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದೀರಿ?ನಿಮ್ಮ ಮಂತ್ರಿಯ ಹಣದ ದಾಹದ ಬಗ್ಗೆ ಮದ್ಯ ಮಾರಾಟಗಾರರ ಸಂಘ ಆರೋಪ ಮಾಡಿದೆ. ಬಕಾಸುರನಿಗೆ ಭೀಮನ ಬಲ ತೋರಿಸಬೇಕು. ನಿಮ್ಮ ಭ್ರಷ್ಟಾಚಾರಕ್ಕೆ ಆತ್ಮಸಾಕ್ಷಿಯೇ ಉತ್ತರ ಹೇಳುತ್ತದೆ. ನೀವು ದುರ್ಬಲ,ಭ್ರಷ್ಟಾಚಾರ ಪ್ರೋತ್ಸಾಹಿಸುವ ಮುಖ್ಯಮಂತ್ರಿಯಾಗಿದ್ದೀರಾ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.
PublicNext
12/11/2024 06:19 pm