ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರ ಕರ್ನಾಟಕದ ಸಾಂಸ್ಕøತಿಕ ನಾಡು ತೇರದಾಳ-ಕನ್ಹೇರಿ ಅದೃಶ್ಯಕಾಡಸಿದ್ದೇಶ್ವರ ಶ್ರೀ

ರಬಕವಿ-ಬನಹಟ್ಟಿ:

ಉತ್ತರ ಕರ್ನಾಟಕದ ಸಾಂಸ್ಕøತಿಕ ನಾಡು ತೇರದಾಳ ಸೇರಿದಂತೆ ಈ ಭಾಗದ ರಬಕವಿ-ಬನಹಟ್ಟಿ, ಜಮಖಂಡಿಗಳಲ್ಲಿ ಸಾಂಸ್ಕøತಿಕ ನೆಲ, ಜಲ, ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳ ವಿಶೇಷತೆಗಳನ್ನು ಕಾಣಬಹುದಾಗಿದೆ ಎಂದು ಕೋಲ್ಲಾಪೂರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತೇರದಾಳ ಕ್ಷೇತ್ರಾಧಿಪತಿ, ಶೂನ್ಯಸಿಂಹಾಸನಾಧೀಶ್ವರ ಶ್ರೀ ಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಹಿನ್ನೆಲೆ ಶುಕ್ರವಾರ ಆಯೋಜಿಸಿದ ರೈತ- ಸೈನಿಕ ಸಮಾವೇಶದಲ್ಲಿ ಅವರು ದಿವ್ಯಸಾನಿಧ್ಯವಹಿಸಿ ಮಾತನಾಡಿ,

ದೇಶ ಉಳಿಯಬೇಕಾದರೇ ಸಾಂಸ್ಕøತಿಕ ಮೌಲ್ಯಗಳು ಉಳಿಯಬೇಕು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ತೇರದಾಳ ಜನತೆ ಗಟ್ಟಿಗರಾಗಿದ್ದಿರಿ ಎಂದು ಸ್ಥೈರ್ಯದ ಮಾತನ್ನು ತುಂಬಿದರು.

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಮಾಜಸೇವೆ ಮಾಡುವ ರೈತ, ಕಠಿಣ ವಾತಾವರಣದ ಪರಿಸ್ಥಿತಿಯಲ್ಲಿ ಸೈನಿಕರು ಸೇವೆ ಮಾಡುತ್ತಿದ್ದಾರೆ. ರೈತ ಸೇರಿ ಸಮಸ್ತ ತಾಯಂದಿರು ಮಕ್ಕಳಿಗೆ ಶಿಕ್ಷಣ ಕೊಡಿ. ನನ್ನ ತಾಯಿ ಕೂಲಿ ಮಾಡಿ ನನಗೆ ಶಿಕ್ಷಣ ನೀಡಿದ್ದಾಳೆ ಎಂಬ ತಮ್ಮ ಬದುಕನ್ನು ತೆರೆದಿಟ್ಟರು ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಸಿದ್ದು ಸವದಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ದಪ್ಪ ಬೀದರಿ, ಮಾಜಿ ಸೈನಿಕ ಜಗದೀಶ ಪೂಜಾರಿ, ಕಪ್ಪತಗುಡ್ಡದ ಶಿವಕುಮಾರ ಸ್ವಾಮೀಜಿ ಮಾತನಾಡಿದರು.

ಇದೆ ಸಂದರ್ಭದಲ್ಲಿ ರೈತ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಹಳೆಹುಬ್ಬಳ್ಳಿಯ ಜಗದ್ಗುರು ಶಿವಶಂಕರ ಶಿವಾಚಾರ್ಯ, ಹುಲ್ಯಾಳದ ಹರ್ಷಾನಂದ ಸ್ವಾಮೀಜಿ, ತೇಲಂಗಾಣದ ವೀರೂಪಾಕ್ಷಯ್ಯ ಸ್ವಾಮೀಜಿ, ಡಾ.ಮಹಾಂತಪ್ರಭು, ಹಿರೇಮಠದ ಗಂಗಾಧರದೇವರು ಸೇರಿದಂತೆ ರೈತ ಮುಖಂಡರು, ಮಾಜಿ ಸೈನಿಕರು, ಕೃಷಿ, ತೋಟಗಾರಿಕೆ, ನೀರಾವರಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ಪ್ರತಿದಿನದಂತೆ ಪ್ರಸಾದವನ್ನು ಸ್ವಿಕರಿಸಿದರು.

Edited By : PublicNext Desk
Kshetra Samachara

Kshetra Samachara

08/11/2024 10:13 pm

Cinque Terre

26.62 K

Cinque Terre

0